Friday, February 14, 2014

ಮರೆತು ಹೋದ ಮರಣ ಎಂಬ ಸತ್ಯ (ಲೇಖನ)








ನಾವೆಲ್ಲರೂ ಜೀವನದ ಜಂಜಾಟದಲ್ಲಿ  ಭೂಮಿಗೆಕೆ ಬಂದಿದ್ದೇವೆ ಎನ್ನುವ ವಾಸ್ತವಿಕತೆಯನ್ನು ಮರೆತುಬಿಟ್ಟಿದ್ದೇವೆ,ಮತ್ತು ಇಲ್ಲಿಯ ಸುಖಕ್ಕಾಗಿ ಎಲ್ಲವನ್ನು ಮರೆತು ಅದರಲ್ಲಿ ತಲ್ಲಿನರಾಗಿದ್ದೇವೆ,  ಶಾಂತಿ, ನ್ಯಾಯ, ಪ್ರೀತಿ ಉಳಿಸಿಕೊಳ್ಳಬೆಕಾಗಿದ್ದ ನಾವು ಪರಸ್ಪರ ಕೆಸರೆರೆಚಾಟದಲ್ಲಿ  ತೊಡಗಿದ್ದೇವೆ, ಇದಕ್ಕೆಲ್ಲ  ಕಾರಣ ನಾವು ತಿಳಿದಿರುವ ಒಂದು ಸತ್ಯವನ್ನು ಮರೆತಿದ್ದೇವೆ, ಇ ಭೂಮಿಗೆ ಬಂದ ಎಲ್ಲ ಮನುಷ್ಯರು ಖಂಡಿತ  ಒಂದು ದಿನ ಸಾಯಲೇಬೇಕು, ಎಲ್ಲರೂ  ಮರಣದ ರುಚಿಯನ್ನು ಅನುಭವಿಸಲೇಬೇಕು,  ಎಲ್ಲ ಮನುಷ್ಯನ ಮಕ್ಕಳು ಮರನವನ್ನಪ್ಪಲೇಬೆಕು, ನಮ್ಮ ಕಣ್ಣ ಮುಂದೆ  ಇದ್ದ ಅದೆಸ್ಟೋ ದೇವತಾ ಮಾನವರು ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ ಅದೇ ಹಾದಿಯಲ್ಲಿ ನಾವು ಕೂಡ ಮಣ್ಣಿಗೆ ಸೇರಲೇಬೇಕು, ದೇವನಲ್ಲದ ಪ್ರತಿಯೊಂದು ಜೀವವೂ ಇಲ್ಲಿ ನಾಶವಾಗಲಿದೆ  ಇದು ಸತ್ಯ, ರಾಜ್ಯದ ಮುಖ್ಯಮಂತ್ರಿಯಾದರು, ಸ್ತಾನಮಾನ ಇಲ್ಲದ ಕೇವಲ ಪ್ರಜೆಯಾದರು ,ಬಿಳುಪು ಇರುವವನಾದರು, ಕಪ್ಪಿರುವವನದರು, ಅಧಿಕಾರಿಯಾದರು, ರಾಜನಾದರೂ,ಕುಬೇರನಾದರು,ದುರ್ಭಳನಾದರು  
ಎಲ್ಲ ಶರೀರವು ಮರಣದ ರುಚಿಯನ್ನು ಸವಿಯಲೇಬೆಕು, ನೀವಿಸ್ಟಪಟ್ಟರೂ, ನೀವಿಸ್ಟಪಡದಿದ್ದರೂ, 
ನೀವು ಬಯಸಿದರೂ, ಬಯಸದಿದ್ದರೂ ಅದು ನಿಮ್ಮನ್ನು ತಲುಪಿಯೇ ತೀರುವುದು , ಮರಣವನ್ನು ಯಾರು ಕೂಡ ಇಷ್ಟಪಡುವುದಿಲ್ಲ,ಸಸ್ತ್ರಚಿಕಿತ್ಸೆ, ಮದ್ದು ಇವೆಲ್ಲ ನಿಮ್ಮ  ರೋಗವನ್ನು ತಡೆಯಬಹುದೇ ಹೊರತು ಮರನವನ್ನಲ್ಲ, 

ಮರಣದ ನಂತರವೂ ಒಂದು ಜೀವನವಿದೆ ಅಲ್ಲಿ ನಾವು ವಿಜಯಿಗಳಾಗಲಿಕ್ಕಿದೆ,ಪರಾಜಿತರಾಗಲಿಕ್ಕಿದೆ.  ಭಾಗ್ಯವಂತರಾಗಲಿಕ್ಕಿದೆ, ನಿರ್ಭಾಗ್ಯವಂತರಾಗಲಿಕ್ಕಿದೆ , ನಾವು ಎಲ್ಲರಿಗೂ ತಿಳಿದು ಮಾಡಿದ  ಕೆಲಸವೂ, ಯಾರಿಗೂ ತಿಳಿಯದೆ ರಾತ್ರಿಯ ಅಂಧಕಾರದಲ್ಲಿ  ಮಾಡಿದ  ಕೆಲಸಗಳೂ ದೇವನ ಮುಂದೆ ಪ್ರಸ್ತಾಪಿಸಲ್ಪಡಳಿದೆ ,ಜನರಿಗೆ ಕಣ್ಣಾ   ಮುಚ್ಚಲೆಯಾಡಿಸಿದ ಪ್ರತಿಯೊಂದು ಕ್ಷಣವೂ  ಅಲ್ಲಿ ಪ್ರಸ್ನಿಸಲ್ಪಡಲಿಕ್ಕಿದೆ,  ಅಂದು ನಮ್ಮ ಬಾಯಿಗೆ ಬೀಗ ಜಡಿಯಳಾಗುವುದು ,ಅಂದು ಸಾವಿರಾರು ಸುಳ್ಳು ಹೇಳಿದ ನಮ್ಮಿಂದ ಸುಳ್ಳು ಹೇಳಲಿಕ್ಕೆ ಸಾದ್ಯವಾಗದು, ಅಂದು ನಾವು ಅಸಹಾಯಕರು ,ಯಾವ ಮಂತ್ರಿ ಮಹಾಶಯರು ನಮ್ಮ ಪರವಾಗಿ ನಿಲ್ಲಳಾರರು, ಯಾರೂ ನಮ್ಮ ಪರವಾಗಿ ವಾಧಿಸಳಾರರು, ಅಂದು ಯಾರು ಬಚಾವಗುವರೊ ಅವರೇ ನಿಜವಾದ ವಿಜಯಿಗಳೇ  ಹೊರತು ಭೂಮಿಯಲ್ಲಿ ಐಎಎಸ್ ಪಾಸದವನೋ, ಡಾಕ್ಟರ್ ಆಗಿ ಜನರನ್ನು  ವಂಚಿಸಿದವನೊ, ಶ್ರೀಮಂತನಾಗಿ ಬದುಕಿದವನು   ವಿಜಯಿಯಲ್ಲ, ಇ ಭೂಮಿಯಲ್ಲಿ  ಸತ್ಕರ್ಮ ಮಾಡಿದವನು,ದೇವನ ಆಜ್ಞೆಗೆ ಅನುಸರಿಸಿ ಜೀವಿಸಿದವನು ಮಾತ್ರ ಅಂದು ವಿಜಯಿ, ಇ ಲೋಕದ ಜೀವನ ಒಂದು ಆಟ, ಇ ಲೋಕದ ಆಹ್ಲಾದ ನಿಜವಾಗಿಯೂ ನಮ್ಮನ್ನು  ವಂಚಿಸುತ್ತಿದೆ, ನಾಳೆ ಪರಲೋಕದ ಸುಂದರ ಕ್ಷಣಗಳಿಗಾಗಿ ನಾವು ಸಿದ್ದತೆ ನಡೆಸಿಕೊಳ್ಳಬೇಕು,ಮರಣವು ನಮ್ಮ ಬೆನ್ನ ಹಿಂದೆ ನಿಂತು ಕಾಯುತ್ತಿದೆ ಎನ್ನುವುದನ್ನು ಮರೆಯದಿರೋಣ ..................

No comments: