Thursday, February 13, 2014

ದುರಂತಗಳ ಮಧ್ಯೆ ನಾವೂ ದುರಂತವಾಗದಿರೊನ (ಲೇಖನ)



 ತಳ್ಳಲ್ಪಡುತ್ತಿರುವ ಮನುಷ್ಯರ  ರೋಧನೆ ಅರಿಯಲು ನಮ್ಮ ಸರಕಾರಗಳಿಗೆ ಸಾಧ್ಯವಾಗಿಲ್ಲ, ಸಂಘ ಸಂಸ್ತೆಗಳಿಗೆ   ಅದನ್ನು ಅಭ್ಯಸಿಸಿ  ಮುಗಿಸುವ ಸಮಯವೂ ಬಂದಿಲ್ಲ, ಲಕ್ಸಗಟ್ಟಲೆ  ಆದಿವಾಸಿಗಳನ್ನು ಅವರು ಬದುಕುತಿದ್ದ ಭೂಮಿಯಿಂದ ಅವರನ್ನು ಹೊರಗಟ್ಟಿದಾಗ ಅದು ಚರ್ಚಾ ವಿಷಯವೇ ಆಗಲಿಲ್ಲ, ಸಮುದ್ರದ ದಡದಲ್ಲಿ ವಾಸಿಸುತ್ತಿರುವ ಬೆಸ್ತರ ಕಷ್ಟವನ್ನು ಅರಿಯುವ ಪ್ರಯತ್ನವೂ ನಡೆದಿಲ್ಲ, ನೀರು ಸಿಗದ, ವಸ್ತ್ರ ಸಿಗದ ಸಾವಿರಾರು ಕಾಲೊನಿಗಳು ನಮ್ಮಲ್ಲಿವೆ, ಚಿಕಿಸ್ತ್ಸೆ ಪಡೆಯಲು ಸಾದ್ಯವಿಲ್ಲದ ಸಾವಿರಾರು ಮನುಷ್ಯರು  ನಮ್ಮ ಮಧ್ಯೆ ಇದ್ದಾರೆ, ವಿಧ್ಯಾಬ್ಯಾಸದಲ್ಲಿ  ನಾವು ಇನ್ನಷ್ಟೇ  ಮುಂದೆ ಬರಬೇಕಾಗಿದೆ,  ಎಲ್ಲ ಸಮಸ್ಯೆಗಳ ಮಧ್ಯೆ ಒಂದರ ಹಿಂದೆ ಒಂದರಂತೆ ಬರುವ ಸರಕಾರಗಳು ಹೊಸ ಮಂತ್ರಗಳನ್ನು ಜಪಿಸುತ್ತಿವೆ,  ಎಲ್ಲ ಬದಲಾವಣೆಗಳು ಉಳ್ಳವರ ಪಾಲಿಗೆ ವರದಾನವಾಗುತ್ತಿದೆ. ಇನ್ನೊಂದು ಕಡೆ ಸಂಸ್ಕೃತಿಯ ಹೆಸರಿನಲ್ಲಿ ಕೋಮು ಬೀಜವನ್ನು ಬಿತ್ತುತ್ತಿರುವ ರಾಕ್ಸಸರ ಅಟ್ಟಹಾಸ ಮೆರೆಯುತ್ತಿದೆ, ಪ್ರತೀಕಾರವಾಗಿ  ಧರ್ಮಾಂಧತೆಯ  ಅಂಧಕಾರದಲ್ಲಿ ಯುವಕರ ದುರ್ವರ್ತನೆ ಮಿತಿಮೀರಿ ಧರ್ಮದ ಆದರ್ಶ ಮರೆಯಾಗುತ್ತಿವೆ. ಕಾನೂನಿನ ಮೇಲೆ ಜನರಿಗೆ ನಂಬಿಕೆ ಕಡಿಮೆಯಾಗುತ್ತಿದೆ, ಮೌಲ್ಯಾದಾರಿತ  ಚಿಂತನೆಗಳು ಸಮಾಜದಿಂದ  ದೂರವಾಗುತ್ತಿದೆ, ಇವೆಲ್ಲದರ ಮಧ್ಯೆ ನಾವು ದ್ವನಿ ಇಲ್ಲದವರಿಗೆ ದ್ವನಿಯಾಗಬೆಕು, ಕಾನೂನುಗಳು ಕೇವಲ ಪುಸ್ತಕದ ಅಕ್ಷರಗಳಿಗೆ  ಸೀಮಿತವಾಗದೆ ಪ್ರತಿಯೊಬ್ಬ ಮರ್ಧಿತನ,ರೋಧಿತನ ಪರವಾಗಿ ನಿಲ್ಲಬೇಕು,ನಮ್ಮೆಲ್ಲರ ಮೌನ ದುರಂತಗಳಿಗೆ ಕಾರಣ , ಇನ್ನಾದರೂ ಎಚ್ಚೆತ್ತುಕೊಲ್ಲೊನ,  ದುರಂತಗಳ ಮಧ್ಯೆ   ನಾವೂ ದುರಂತವಾಗದಿರೊನ  ... 




No comments: