Wednesday, February 26, 2014

ಸಂಘಟನೆಗಳು ಕಾರ್ಯಕರ್ತರ ಸಮಸ್ಯೆಯನ್ನರಿತು ಹರಿಕಾರಾನ್ನಾಗಿ ಮಾಡಲಿ !! (ಲೇಖನ)








ನೂರಾರು ರಾಜಕೀಯ ಪಕ್ಷಗಳು, ಹಲವಾರು ಧಾರ್ಮಿಕ ಸಂಘಟನೆಗಳು, ಹತ್ತಾರು ಸಾಮಾಜಿಕ ಸಂಸ್ಥೆಗಳು, ಸಣ್ಣ ಪುಟ್ಟ ವಿಚಾರಗಳಲ್ಲಿ ಭಿನ್ನಬಿಪ್ರಾಯ ಹೊಂದಿ ಬೇರೆಯಾದ ಕೂಟಗಳು ನಮ್ಮಲ್ಲಿ ಕಾಣಲಿಕ್ಕೆ ಸಿಗುತ್ತವೆ. ಇವರೆಲ್ಲರಿಗೂ ಅವರದೇ ಆದ ಹಿತಾಶಕ್ತಿಗಳಿವೆ ಮತ್ತು ತಮ್ಮದೇ ಆದ ಧೊರಣೆಗಳಿವೆ, ಅಸ್ಟು ಮಾತ್ರವಲ್ಲ ಜನರ ಮುಂದೆ ಹೋಗಲು ಮತ್ತು ತಮ್ಮ ಕಾರ್ಯಕ್ರಮದ ಪರಿಚಯ ಮಾಡಲು ತಮ್ಮದೇ ಆದ ಆಫೀಸ್ ಗಳಿವೆ, ಕಾರ್ಯಕರ್ತರಿದ್ದಾರೆ, ತಮ್ಮದೇ ಬಾವುಟಗಳಿವೆ, ಘೋಷನೆಗಳಿವೆ, ಲೆಟರ್ ಹೆಡ್ಗಳು, ಸ್ಟ್ಯಾಂಪ್ಗಳೂ ಇವೆ , ಚಿಕ್ಕ ಮತ್ತು  ದೊಡ್ಡದಾದ ಸಮಾವೇಶಗಲೂ ನಡೆಯುತ್ತವೆ. ಇವೆಲ್ಲದರ ಮಧ್ಯೆ ತಾವೇ ಮಾಡುವ ತಪ್ಪುಗಳಿಂದಾಗಿ ಇವರ ಧೊರಣೆಗಳನ್ನು ಪೂರ್ತಿಗೊಳಿಸುವಲ್ಲಿ, ಗುರಿ ಸಾಧಿಸುವುದರಲ್ಲಿ ಇವರು ಎಡವಿದ್ದಾರೆ.

ಇವೆಲ್ಲಾ ಇದ್ದು ಇವರಿಗೆ ಗುರಿ ತಲುಪಲಾಗಲಿಲ್ಲ, ಎಲ್ಲರೂ ಸೋತುಹೊಗುತಿದ್ದಾರೆ, ಮೂಲೆಗುಂಪಾಗುತಿದ್ದಾರೆ, ಬಿನ್ನತೆಯಿಂದ ಚಿದ್ರ ಚಿದ್ರವಾಗಿ ಬೇರ್ಪಡುತಿದ್ದಾರೆ, ತಮ್ಮವರ ವಿರುದ್ದವೇ ಕತ್ತಿಮಸೆಯುತಿದ್ದಾರೆ, ಶತ್ರು ಯಾರು ಮಿತ್ರ ಯಾರು ಎಂದು ತಿಳಿಯದಸ್ಟರ ಮಟ್ಟಿಗೆ ತಲುಪಿಬಿಟ್ಟಿದ್ದಾರೆ, ಇವರಿಗೆ ಯಾವ ನಿರೀಕ್ಷೆಗಳನ್ನೂ ಪೂರ್ತಿ ಮಾಡಿಕೊಳ್ಳಲಾಗುತ್ತಿಲ್ಲ, ಕಡೆ ಪಕ್ಷ ಅವರದೇ ನಿರೀಕ್ಷೆಗಳನ್ನು ಪೂರ್ತಿ ಮಾಡಿಕೊಳ್ಳಲೂ ಅರ್ಹರಾದಂತಿಲ್ಲ. ಇದಕ್ಕೆ ಕಾರಣಗಳು ಹಲವು ಮತ್ತು ಅವು ಹುಡುಕಿದಸ್ಟು  ಮುಗಿಯದವು.

                                              ಎಡವಿದ್ದೆಲ್ಲಿ??

ಇವರೆಲ್ಲ ಎಡವಿರುವುದಕ್ಕೆ ಹಲವು ಕಾರಣಗಳ ಪಟ್ಟಿ ಮಾಡಬಹುದಾದರೂ ಬಹುಮುಖ್ಯವಾಗಿ ಇವರಾರಿಗೂ ಇವರ ಕಾರ್ಯಕರ್ತರ ಸಮಸ್ಯೆಗಳನ್ನು ಅರಿಯಲು ಸಾದ್ಯವಾಗಿಲ್ಲ ಆ ಕಾರಣದಿಂದ ಕಾರ್ಯಕರ್ತರನ್ನು ತಮ್ಮ ಅಂಧೋಲನದ ಆದರ್ಶದ ಅಡಿಪಾಯದಲ್ಲಿ ಉಳಿಸಿಕೊಳ್ಳಲಾಗಲಿಲ್ಲ, ರಾಜಕೀಯವಾಗಿ ಸಬಲೀಕರಣ ಮಾಡಬೇಕಾಗಿದ್ದ, ಧಾರ್ಮಿಕವಾಗಿ ಉನ್ನತಿಗೊಳಿಸಬೇಕಾಗಿದ್ದ ನಾಯಕರು ಈ ವಿಚಾರದಲ್ಲಿ ಎಡವಿಕೊಂಡಿದ್ದಾರೆ.ಮತ್ತು ಹಲವು ನಿಷ್ಠಾವಂತ ಕಾರ್ಯಕರ್ತರನ್ನು ಕಳೆದುಕೊಂಡಿದ್ದಾರೆ ಮತ್ತು ಹಲವು ಹೊಸ ಸಂಘಟನೆಗಳ ಉದಯಕ್ಕೆ ಇದು ಕಾರಣವಾಯಿತು  ಕೂಡಾ. 


ಕಾರ್ಯಕರ್ತರು ಇವರು ಹೇಳುವ ಎಲ್ಲ ಸಿದ್ದಾಂತಗಳನ್ನು ಒಪ್ಪಿಕೊಳ್ಳಲು ಸಿದ್ದರಿದ್ದಾರೆ, ಅದಕ್ಕಾಗಿ ದುಡಿಯಲು ತಯಾರಿದ್ದಾರೆ, ಆದರೆ ಕಾರ್ಯಕರ್ತರು ಬೇಸತ್ತು ಹೋಗಿದ್ದಾರೆ, ಇವರ ಜೀವನದ ನೈಜ ಸಮಸ್ಯೆಗೆ ಪಾರಿಹಾರ ನೀಡುವಲ್ಲಿ ಯಾವ ರಾಜಕೀಯ ಪಕ್ಷಗಳೂ, ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಗಳು ಗಮನ ಕೊಡಲಿಲ್ಲ, ಎಲ್ಲರೂ ಕಾರ್ಯಕರ್ತರನ್ನು ತಮ್ಮ ಕೆಲಸ ಸಾಧನೆಯ ದಾಳವನ್ನಾಗಿ ಮಾಡಿದರು.  ರಾಜಕೀಯ ಪಕ್ಷಗಳು ಓಟು ಬಂದಾಗ ನೋಟು ನೀಡಿ ನಂತರ ಕೈ ಬಿಡುತ್ತವೆ ನೋಟು ತೆಗೆದು ಓಟು ಹಾಕಿದವನು  ತನಗೆ ತನ್ನನ್ನೇ  ಬೈದುಕೊಳ್ಳುವ ಪ್ರಮೇಯ ಬರುತ್ತದೆ. ಧಾರ್ಮಿಕ ಸಂಘಟನೆಗಳಿಗೆ ಜನರು ವಾಲುವುದು ಬಹಳ ಬೇಗ ಮತ್ತು ಅದರಿಂದ ದೂರವಾಗುವುದು ಅಸ್ಟೇ ಬೇಗ.

ಒಂದು ಸಿದ್ದಾಂತವನ್ನು ಒಪ್ಪಿಕೊಂಡು ಅದಕ್ಕಾಗಿ ಕೆಲಸ ಮಾಡುವ ಕಾರ್ಯಕರ್ತರ ಕೊರತೆ ಉಂಟಾಯಿತೆ ಎಂದು ವಿಮರ್ಶಿಸಿದರೆ ಖಂಡಿತ ಇಲ್ಲ ಎಂದೇ ಹೇಳಬಹುದು ಆದರೆ ಸಂಘಟನೆಗಳು ಕಾರ್ಯಕರ್ತರ ಆರ್ಥಿಕ ಸ್ತಿತಿ ಸುಧಾರಿಸುವಲ್ಲಿ  ಗಾಮನಾರ್ಹ ಕೆಲಸ ಮಾಡಲಿಲ್ಲ, ಬೇಸೆತ್ತ  ಕಾರ್ಯಕರ್ತರು ತಮ್ಮ ಮನೆಯಲ್ಲಿ ಆರ್ಥಿಕ ಪರಿಸ್ತಿತಿ ಕೆಟ್ಟುಹೋಗಿ ಸಹಜವಾಗಿ  ಆಂಧೋಲನದ ಕೆಲಸಗಳಿಂದ ದೂರವಾಗುತ್ತಾರೆ, ತಮ್ಮ ನಾಯಕರು ಸ್ವಾರ್ಥಕಾಗಿ ತಮ್ಮನ್ನು  ಬಲಸುತ್ತಿದ್ದಾರೋ ಎಂದು ಚಿಂತಿಸುವ ಮಟ್ಟಕ್ಕೆ ತಲುಪಿಬಿಡುತ್ತಾರೆ ಮುಂದೆ ಇದು ಆಂಧೋಲನಕ್ಕೆ ಮುಳುವಾಗುತ್ತದೆ. 

ಬೇರೆ ಯಾವುದೇ ಕೆಲಸ ಮಾಡದೆ ಆಂಧೋಲನಕ್ಕಾಗಿ ದುಡಿದ ನಂತರವೂ ತನ್ನ ಮತ್ತು ತಮ್ಮವರ  ಹೊಟ್ಟೆ ತುಂಬಿಸಿಕೊಳ್ಳಲು  ಕನಿಸ್ಟ ಪಕ್ಷ ಸಾಧ್ಯವಾಗದೆ ಹೋದಾಗ ಅವನು ಹೊಟ್ಟೆ ಹೊರೆಯುವುದಕ್ಕಾಗಿ ಸಹಜವಾಗಿ ಸಂಘಟನಾ ಕೆಲಸದಿಂದ ದೂರವಾಗುತ್ತಾನೆ. ಒಬ್ಬನು ಸಂಘಟನೆಗಾಗಿ ದಿನನಿತ್ಯ ಕೆಲಸ ಮಾಡುವಾಗ ಅವನ ಅಗತ್ಯಕ್ಕೆ ತಕ್ಕಸ್ಟು ಆರ್ಥಿಕ  ಸಹಾಯ ನೀಡಿ ಅವನನ್ನು ಮೇಲೆ ತರಬೇಕಾದದ್ದು ಸಂಘಟನೆಯ ಕೆಲಸ , ಆಂಧೋಲನಗಳು ಅವನ ಜೀವನಕ್ಕೆ ಮುಳುವಾಗಬಾರದು, ಅವನನ್ನು ನಂಬಿಕೊಂಡಿರುವವರ ಕಣ್ಣಲ್ಲಿ  ಕಣ್ಣೇರು ತರಿಸುವ ರೀತಿಯಲ್ಲಿ ಸಂಘಟನೆಗಾಗಿ ಪೂರ್ತಿಯಾಗಿ ಕೆಲಸ ಮಾಡುವವನಿಗೆ ಸಂಘಟನೆಗಳು ಅವಕಾಸ ನೀಡಬಾರದು.

ಪೂರ್ಣಾವಧಿಯಲ್ಲಿ ಸಂಘಟನೆಗಾಗಿ ಕೆಲಸ ಮಾಡುವವನಿಗೆ ಅವನ ಜೀವನ ಸಾಗಿಸಲು ಅಗತ್ಯವಿರುವಸ್ಟು ಸಂಬಳ ನೀಡಬೇಕು. ಆರ್ಥಿಕವಾಗಿ ಅವನನ್ನು ಸದ್ರಡಗೊಳಿಸಬೇಕು, ಅವನು ಬಲವಾದಾಗ ಅವನು  ಆಂಧೋಲನದ ಯಶಸ್ಹ್ವಿಗಾಗಿ  ದುಡಿಯುತ್ತಾನೆ. ಪಡೆಯುತ್ತಿರುವ ಕಡಿಮೆ ಸಂಬಳ ಮತ್ತು  ಅವನ ಆರ್ಥಿಕ  ದುರ್ಬಲ ಸ್ಥಿತಿ  ಅವನು ಆಂಧೋಲನ ಬಿಟ್ಟು ಹೋಗಲು ಮತ್ತು ಕೆಟ್ಟ ಕೆಲಸಗಳತ್ತ ಕೈ ಹಾಕಲು, ಬಡ್ಡಿವ್ಯವಹಾರದಂಥಹ ವ್ಯಾಪಾರಗಳಿಗೆ ಆಸಕ್ತಿ ತೋರಿಸಲು ಕಾರಣ ಮತ್ತು ಹೆಚ್ಚಿನ ಸಂಘಟನೆಗಳು ಎಡವಿರುವುದು ಕೂಡಾ ಇಲ್ಲೇ.

ತನ್ನ ಕಾರ್ಯಕರ್ತರನ್ನು  ಬಲಪಡಿಸಿದಾಗ ಸಹಜವಾಗಿ ಆಂಧೋಲನ ಬಲಗೊಳ್ಳುತ್ತದೆ ಮತ್ತು ಅದು ಅದರ ಗುರಿಯನ್ನು ತಲುಪಲು ಸಹಕಾರಿಯಾಗುತ್ತದೆ, ಈ  ಸಮಸ್ಯೆಯನ್ನು ಪರಿಹರಿಸಿದರೆ ಒಂದರಿಂದ ಇನ್ನೊಂದಕ್ಕೆ ಹಾರುವ ಕಪ್ಪೆಗಳಂತಾಗದಿರಳು, ಕಾರ್ಯಕರ್ತರನ್ನು ಸ್ತಿರವಾಗಿ ನಿಲ್ಲಿಸಲು ಸಾದ್ಯ ಮತ್ತು ಇನ್ನಸ್ಟು ಆಂಧೋಲನ ಹುಟ್ಟಿಗೆ ಕಾರಣವಾಗದೆ ಕಾರ್ಯಕರ್ತರನ್ನು ಬಲಿಸ್ಟವಾಗಿಸಿ  ಅವರನ್ನು ಈ ಜನತೆಯ ಮುಂದೆ ಹರಿಕಾರರನ್ನಾಗಿ ಮಾಡಲು ಸಾದ್ಯ.


 

No comments: