Thursday, February 13, 2014

ನೈತಿಕ ಪೋಲಿಸ್ಗಿರಿ (ಚುಟುಕ)



ನೈತಿಕ ಪೋಲಿಸ್ಗಿರಿಗೆ ತುತ್ತಾದ ಒಬ್ಬ ಯುವಕ ಬರೆದರೆ ಹೇಗಿರುತ್ತದೆ.?



ಹೆಣ್ಣೊಬ್ಬಳು ನನ್ನನ್ನು ತಿರುಗಿ ತಿರುಗಿ ನೋಡಿದಳು,
ನಾನದನ್ನು ಪ್ರೇಮವೇ ಎಂದು ತಿಳಿದುಕೊಂಡೆ.

ಗುಲಾಬಿ ಕೈಯಲ್ಲಿಡಿದು ಕೊಡೋನವೆಂದು ಕೊಂಡು ಹೋದೆ,
ಪರಿಚಯಿಸಿಕೊಂಡ ಅವಳು ದೂರವಾಣಿ ಸಂಖ್ಯೆ ನೀಡಿ ಕರೆಮಾಡೆಂದಳು.

ಹಳ್ಳಕ್ಕೆ ಬಿದ್ದ ನಾನು ಕರೆಮಾಡಿದಾಕ್ಷಣ ಸಿಗೋನವೆಂದಳು,
ಪ್ರೇಮದ ಅಮಲಿನಲ್ಲಿ ಎಲ್ಲ ಮರೆತು ಸಿದ್ದವಾದೆ ಭೇಟಿಗಾಗಿ.

ಅವಳು ಹೇಳಿದ ಜಾಗದಲ್ಲಿ ಸಿಕ್ಕ ಕ್ಷಣ ಯುವಕರ ಗುಂಪು ಬೆನ್ನ ಹಿಂದೆ ಇತ್ತು,
ಅವರು ಹೊಡೆದ ಹೊಡೆತದ ರಭಸಕ್ಕೆ ನನ್ನ ಕೈ ಮೂಲೆಯೂ ಮುರಿಯಿತು.

            ಅವರು ನನಗೆಂದೇ ಬೀಸಿದ ಜಾಲದಲ್ಲಿ ನಾನು ಸುಲಭವಾಗಿ ಬಿದ್ದೆ,
         
ಹೆಣ್ಣಿನ ಮೋಹಕ್ಕೆ ಸಿಕ್ಕಿ ಪತ್ರಿಕೆಯ ಮುಕಪುಟದಲಿ ಸುದ್ದಿಯಾದೆ...

No comments: