Friday, February 14, 2014

ವಿದೇಶ ಯಾತ್ರೆ ಶಾಪವಾಗದಿರಲಿ (ಲೇಖನ)





ಭಾರತ ದೇಶದ ಅನೆಕ ಮುಸ್ಲಿಮರು ಉದ್ಯೋಗಕ್ಕೆಂದು ಹೊರದೇಶಗಳಿಗೆ ಹೋಗುವುದು ಸಾಮಾನ್ಯ ಸಂಗತಿ, ಅದರಲ್ಲೂ ಕೇರಳ ಮತ್ತು ಕರಾವಳಿ ಭಾಗದ ಯುವಕರಂತು ಅತ್ಯಧಿಕ ಸಂಖ್ಯೆಯಲ್ಲಿ ಹೊರದೆಶವನ್ನೇ  ನಂಬಿಕೊಂಡಿದ್ದಾರೆ. ಸೌದಿ ಅರೇಬಿಯಾ,ದುಬೈ,ಕುವೈತ್,ಕತಾರ್ ನಂತಹ ದೇಶಗಳಲ್ಲೆ ಜೀವನ ಕಟ್ಟಿಕೊಂಡವರು ಹೆಚ್ಚಿನವರು, ಇದಕ್ಕೆ ಕಾರಣಗಳು ಹಲವು, ಭಾರತದಲ್ಲಿ ಮುಸ್ಲಿಮರ ಮೆಲೆ ಅನ್ಯಾಯವಗದಿದ್ದರೂ ತಾರತಮ್ಯ ನಡೆದಿರುವುದು ಸತ್ಯ, ಭಾರತದಲ್ಲಿ ಬೇಕಾದಷ್ಟು ಉದ್ಯೋಗವಕಾಸಗಳು ಇದ್ದರೂ ಅದನ್ನು ಸರಿಯಾಗಿ ವಿಸ್ತರಿಸುವ ಮತ್ತು ಪ್ರತಿಭೆಗಳಿಗೆ ಅವಕಾಸ ದೊರಕದಿರುವ ಒಂದು ಕಾಲದಲ್ಲಿ ಮುಸ್ಲಿಮ್ ಯುವಕರು ಜೀವನೋಪಾಯಕ್ಕಾಗಿ ವಿದೇಶಗಳಿಗೆ ತೆರಳಬೇಕಾಯಿತು ಮತ್ತು ಅದು ಮುಸ್ಲಿಮ್ ಸಮುದಾಯದ ಉನ್ನತಿಗೆ ಕೂಡ ಕಾರಣವಾಯಿತು.

 ಹಲವಾರು ಮಧ್ಯಮ ವರ್ಗದ ಜನರಿಗೆ ಸುಂದರವಾದ ಬದುಕು ಕಟ್ಟಲು ಸಹಕಾರಿಯಾಯಿತು, ನಮ್ಮ ದೇಶಕ್ಕೆ ಸಾವಿರಾರು ಕೋಟಿಗಳು ಹರಿದು ಬರುವಲ್ಲಿ ಪಾತ್ರ ವಹಿಸಿದೆ ಕೂಡ, ಹಲವಾರು ಸಮಾಜಿಕ ಸಂಘಟನೆಗಳು,ಸಂಸ್ಥೆಗಳು ಕರ್ಯಾಚರಿಸುವಲ್ಲಿ ವಿದೆಶ ಉದ್ಯೊಗದ ಯುವಕರು ಬೆಂಬಲವಾಗಿ ನಿಂತರು. ಇಂದಿನ ಯುವಕರಂತು ಇಪ್ಪತ್ತು ವರ್ಷ ಕಳೆಯುತ್ತಲೇ ವಿಮಾನವೆರುತ್ತಾರೆ, ಬಿಸಿಲ ನಾಡಿನಲ್ಲಿ ಕಷ್ಟಪಟ್ಟು ದುಡಿದು ತಮ್ಮವರಿಗೆ ಹೆಗಲು ಕೊಡುತ್ತಿದ್ದಾರೆ, ಭಾರತದಲ್ಲಿ ದುಡಿಯುತ್ತಿರುವಾಗ ಖರ್ಚು ವೆಚ್ಚಗಲನ್ನು ನಿಭಾಯಿಸಲಾಗದೆ  ವಿದೇಶಕ್ಕೆ ಭಾರವಾದ ಮನಸ್ಸುಗಳಿಂದಲೇ ಹೋದವರು ಜಾಸ್ತಿ ಮತ್ತು ಅಲ್ಲಿಂದ ಹಿಂತಿರುಗಿ ಬಂದು ಇಲ್ಲಿಯೇ ನೆಲೆಸಿದವರು ಬಹಳ ಕಡಿಮೆ ಕೂಡ, ಇದಕ್ಕೆಲ್ಲ ಕಾರಣ ದೇಶದಲ್ಲಿ ಸಿಗುವ ಸಂಬಳ

ಹೀಗೆ ಅಲ್ಲಿ ಎಲ್ಲ ನೆನಪುಗಳನ್ನು ಮರೆತು ದುಡಿಯುತ್ತಿರುವಾಗ ಸಹಜವಾಗಿ ಯುವಕರು ಮದುವೆ ಪ್ರಾಯಕ್ಕೆ ಬರುತಾರೆಮನೆಯವರಿಂದ ಪ್ರಸ್ತಾಪಗಳು ನಡಯುತ್ತವೆ ಮತ್ತು ಇಮೇಲ್,ವಾಟ್ಸ್ಆಪ್ ಮೂಲಕ ಹೆಣ್ಣು ನೋಡುವ ಕಾರ್ಯಕ್ರಮ ಮುಗಿದು ಅದಕ್ಕೆ ಒಪ್ಪಿಗೆಯೂ ಸಿಗುತ್ತದೆ, ಮದುವೆಯ ದಿನವೂ ನಿಶ್ಚಯವಾಗಿ ಕೆಲವು ಸೀಮಿತ ದಿನಗಳ ರಜೆಯಲ್ಲಿ ಊರಿಗೆ ಬರುತ್ತಾರೆ, ಮದುವೆಯ ಸಂಬ್ರಮ, ಸಿದ್ದತೆ ಎಂದು ಸುತ್ತಾಡುತ್ತಾರೆ, ಅದ್ದೊರಿಯಿಂದ ಮದುವೆ ಕಾರ್ಯಕ್ರಮವೂ ಮುಗಿಯುತ್ತದೆ, ನವ ಜೋಡಿಗಳು ಆನಂದದಿಂದ ಅವರದೇ ಲೋಕದಲ್ಲಿ ವಿಹರಿಸುತ್ತಾರೆ, ಸುತ್ತಾಟ ,ಬಂದುಗಳ ಮಿಲನ ಪ್ರತಿನಿತ್ಯ ನಡೆದು,ಒಂದು ಹೊಸ ಜೀವನ ಕಟ್ಟಿಕೊಂಡಿರುತ್ತಾರೆ ,ಮತ್ತು ಹಲವಾರು ನಿರಿಕ್ಷೆಗಳಿರುತ್ತದೆ ,ಆದರೆ ಸುಖದ ದಿನಗಳು ಬಹುದಿನ ಇರುವುದಿಲ್ಲ,ಅಲ್ಪಾವದಿಯ ರಜೆಯಲ್ಲಿ ಬಂದವನ ರಜೆ ಮುಗಿದು ದೂರದ ಊರಿನಿದ ನೆನಪಿನ ಕರೆಯೂ ಬಂದಿರುತ್ತದೆ , ಭಾರವಾದ ಮನಸ್ಸಿನಿಂದ ನವ ವಧು ವರರು ಬಿಳ್ಕೊಡಲೇ ಬೇಕಾದ ಸಂದರ್ಬ, ಹೆಣ್ಣಾದವಳಿಗೆ ಬಿಟ್ಟುಕೊಡಲು ಮನಸ್ಸಿಲ್ಲದಿದ್ದರೂ ಆತ ಹೊಗುತ್ತಿರುವುದು ನಮ್ಮ ಅವಸ್ಯಕತೆಗಳನ್ನು ಪೂರೈಸಿಕೊಳ್ಳಲು ಎನ್ನುವಾಗ ಸುಮ್ಮನಾಗುತ್ತಾಳೆ ಮತ್ತು ಇಬ್ಬರೂ ಕಣ್ಣೀರಿನಿಂದ ಬಿಲ್ಕೊಡುತ್ತಾರೆ,







ಜೀವನದಲ್ಲಿ ವಿರಹ ವೇಧನೆಗಳು ಆರಂಬವಾಗುವುದು ಇಲ್ಲಿಂದ, ಹೆಣ್ಣಾದವಳು ಅತ್ಯಂತ ಸಹನೆ ಮತ್ತು ಸದ್ವರ್ತನೆ ತೋರಿಸಬೇಕಾದ ಸಮಯ, ಮತ್ತು ಹಲವರು ದಾರಿ ತಪ್ಪಿರುವುದು ಇಲ್ಲೇ, ಗಂಡನಾದವನು ತನ್ನ ಎಲ್ಲ ಬೇಡಿಕೆಗಳನ್ನು  ನಿವಾರಿಸಲು ಸಮರ್ಥ ಎಂದು ನಂಬಿಕೊಂಡು ಬಂದವಳು ಹೆಣ್ಣು ,ಆದರೆ ದುಡ್ದೊಂದಲ್ಲದೆ ಬೇರೆ ಭಾವನೆಗಳಿಗೆ ಈತನಿಂದ ಪರಿಹಾರ ಸಿಗದು ಎಂದಾಗ ಅವಳು ಸಹಜವಾಗಿ ನೊಂದುಕೊಳ್ಳುತ್ತಾಳೆ, ಮತ್ತು ಅದರ ಪರಿಣಾಮಗಳನ್ನು ನಾವು ಇಂದು ಸಮಾಜದಲ್ಲಿ ಕಾಣುತಿದ್ದೇವೆ ಕೂಡ, ದುಡ್ಡಿನೊಂದಿಗೆ ಅವಳನ್ನೂ  ನಮ್ಮದಾಗಿಸಿದಾಗ ಒಂದು ಭಲಾಡ್ಯ ಸಮುದಾಯವನ್ನು ಸ್ರಿಸ್ಟಿಸಬಹುದು ,ಅಕ್ರಮ ಸಂಭಂದಗಳ, ಅನುಮಾನಗಳಿಗೆ ಕಾರಣವಾಗುವ ವಿಚಾರಗಳನ್ನು ಇಲ್ಲವಾಗಿಸಬಹುದುಆದರೆ ಕೊನೆಯಲ್ಲಿ ಆರೋಪಗಳೆಲ್ಲ ಹೆಣ್ಣಿನ ಮೆಲೆಯೇ ನೈಜ ಕಾರಣಕರ್ತರು ನಾವೇ ಎನ್ನುವುದನ್ನು ಮಾತ್ರ ಮರೆತಿದ್ದೆವೆ, ಎಲ್ಲಾ ವಿರಹೆ ವೇಧನೆಗಳನ್ನು ತಡೆದುಕೊಂಡು ಸ್ರಿಸ್ಟಿಸಿದ ಸ್ರಿಸ್ತಿಕರ್ತನ ಭಯದಿಂದ ಎಲ್ಲವನ್ನೂ  ಸಹಿಸಿಕೊಂಡ ಹೆಣ್ಣು ಮಕ್ಕಳು ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ, ಆದ್ದರಿಂದ ಅಂಥವರ ಭಾವನೆಗಳಿಗೆ ಬೆಲೆ ಕೊಡಬೇಕಾದದ್ದು ಖಂಡಿತವಾಗಿಯೂ ಗಂಡನೆನಿಸಿಕೊಂಡವನ ಕರ್ತವ್ಯ,



                                                               ಆದ್ದರಿಂದ ಅವರನ್ನು ತಪ್ಪಿಹೋಗದಂತೆ  ನೋಡಿಕೊಳ್ಳುವುದರಲ್ಲಿ ನಮ್ಮ ಪಾತ್ರವೂ ಬಹಳಷ್ಟಿದೆ, ಕೇವಲ ದುಡ್ಡಿನ ವ್ಯಾಮೋಹದ ಹಿಂದೆ ಹೋಗದೆ ವಿಚಾರಗಳಿಗೂ ಸಮುದಾಯದ ಯುವಕರು ಹೆಚ್ಚಿನ ಗಮನ ಕೊಡಬೇಕು, ಮತ್ತು ತಮ್ಮನ್ನು ನಂಬಿಕೊಂಡು ಬಂದವರಿಗೆ ಸಮಾನ ನ್ಯಾಯ ನೀಡಬೇಕು, ಹೊರದೇಶಗಳಿಗೆ ಅಂಟಿಕೊಳ್ಳುವ ನಾವುಗಳು ಇದಕ್ಕೊಂದು ಪರಿಹಾರ ಹುಡುಕಬೇಕಿದೆ, ಒಂದೋ ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಹೆಂಡತಿಯನ್ನೂ ತನ್ನೊಂದಿಗೆ ಬಿಸಿಲ ನಾಡಿಗೆ  ಕರೆದುಕೊಂಡು ಹೋಗುವ ವ್ಯವಸ್ತೆ ಮಾಡಬೇಕು,ಇಲ್ಲವಾದಲ್ಲಿ ಭಾರತದ ಮಣ್ಣಿನಲ್ಲಿಯೇ ಉದ್ಯೊಗವನ್ನು ಹುಡುಕಿಕೊಳ್ಳಬೇಕು,ಅಥವಾ ಇಲ್ಲೇ ಉಳಿದುಕೊಳ್ಳುವ ವ್ಯವಸ್ತೆ ಮಾಡಬೇಕು, ಕುಟುಂಬಗಳು ಒಡೆದು  ಹೊಗುವುದಕ್ಕೆ ನಾವು ಕಾರಣವಾಗಬಾರದು, ವರ್ಷಕ್ಕೊಂದು ಬಾರಿ ಊರಿಗೆ ಬಂದು ಹೋಗುವ ಪರಿಪಾಟವನ್ನಿಟ್ಟು ನಾವೊಂದು ಯಂತ್ರದಂತೆ ಕಾರ್ಯಚರಿಸಿ ದೇವನ ಶಾಪಕ್ಕೆ ತುತ್ತಾಗದಿರೊನ,ನಮ್ಮ ಅಗಲುವಿಕೆ ನಮಗೆ ಶಾಪವಾಗದಿರಲಿ, ದೇಶದಲ್ಲಿದ್ದುಕೊಂಡು ವ್ಯವಸ್ತೆಯನ್ನು ಬದಲಾಯಿಸಿ ಇಲ್ಲೇ ಉಳಿದುಕೊಳ್ಳುವ, ಇಲ್ಲಿಯವರಾಗಿರೊ


No comments: