ಹತ್ಯಾ ಪ್ರಯತ್ನಗಳು ಇಂದು ನಮ್ಮ ಸಮಾಜದಲ್ಲಿ ಸಾಮಾನ್ಯ , ಸಾಮಾನ್ಯವೆಂಬಂತೆ ಒಂದು ಹತ್ಯಾ ಯತ್ನ ನಡೆಯಿತು, ಪರಿಸ್ತಿತಿಯ ಲಾಭ ಪಡೆಯ ಬಯಸಿದವರಿಂದ ಗುಲ್ಲೆಬ್ಬಿಸುವ ಪ್ರಯತ್ನವೂ ನಡೆಯಿತು. ಅಸ್ಟೊತ್ತಿಗೆ ಪೋಲೀಸರ ಪತ್ತೆ ಹಚ್ಚುವ ಕಾರ್ಯವು ಆರಂಬವಾಯಿತು, ಯಾರೂ ಸಿಗದಿದ್ದಾಗ ಅಮಾಯಕರನ್ನು ಬಂದಿಸುವ ನಾಟಕ ಈಗಂತೂ ಸಾಮಾನ್ಯ ಬಿಡಿ, ಹೀಗೆ ತನಿಕೆ ಮುಂದುವರೆಸಿದ ಪೊಲಿಚರು ಒಬ್ಬ ವ್ಯಾಪಾರಿಯ ಬಳಿ ಹೋಗಿ ಸಿ,ಸಿ ಕ್ಯಾಮೆರಾದ ರೆಕಾರ್ಡಿಂಗ್ ಕೇಳಿದರು ವ್ಯಾಪಾರಿ ರೆಕಾರ್ಡ್ ಮಾಡಿಲ್ಲ ಎಂದರು, ಅದಕ್ಕಿಂತ ಕೆಲವು ಹಿಂದಿನ ವಾರಗಳ ಘಟನೆ ನೆನಪಿಸುವುದಾದರೆ ತನ್ನ ಅಂಗಡಿಯ ಸಮೀಪ ಪದೇ ಪದೇ ಘಲಬೆಗಳಿಗೆ ಕುಮ್ಮಕ್ಕು ನೀಡುವ ವಿಚಾರ ಹೆಚ್ಚಾಗಿದ್ದರಿಂದ ಅ ವ್ಯಾಪಾರೀ ಅಂಗಡಿ ಒಳಗಡೆ ಮತ್ತು ಹೊರಗಡೆ ಸಿ,ಸಿ ಕ್ಯಾಮೆರಾ ಅಳವಡಿಸಿದರು ಆದರೆ ಇದನ್ನು ವಿರೋಧಿಸಿದ ಕೆಲವರು ಈತನು ಅಂಗಡಿಗೆ ಬಂದು ಹೋಗುವ ಹುಡುಗಿಯರನ್ನು ಗಮನಿಸಲು ಸಿ,ಸಿ ಕ್ಯಾಮೆರಾ ಅಳವಡಿಸಿದ್ದಾನೆ ಅದನ್ನು ತಕ್ಷಣ ತೆಗೆಸಬೇಕು ಎಂದು ಪಟ್ಟು ಹಿಡಿದರು ಪರಿಸ್ತಿತಿಯ ಗಂಬೀರತೆಯನ್ನು ಅರಿತ ಪೊಲಿಚರು ಅ ಕೂಡಲೇ ಅದನ್ನು ಅಲ್ಲಿಂದ ತೆರವುಗೊಳಿಸಿದರು, ಮತ್ತೆ ಅದೇ ಪೊಲಿಚರು ಸಿ,ಸಿ ಕ್ಯಾಮೆರಾದ ರೆಕಾರ್ಡಿಂಗ್ ಗಾಗಿ ದುಂಬಾಲು ಬೀಳುವುದು ಎಷ್ಟು ಸರಿ ಹೇಳಿ? ಒಂದು ವೇಳೆ ಪೊಲಿಚರು ಅದೇ ಸ್ಥಳದಲ್ಲಿ ಸಿ,ಸಿ ಕ್ಯಾಮೆರಾ ಅಳವಡಿಸಿದ್ದರೆ ಅದು ಇಂದು ಒಂದಷ್ಟು ಪ್ರಯೋಜನಕ್ಕೆ ಬರುತಿತ್ತು , ಸಂಸ್ಕೃತಿಯ ಹೆಸರು ಹೇಳಿ ಸಂಚುಕೊರರು ಅದರ ಲಾಭವನ್ನು ಪಡೆದು ಇಂದು ಆರಾಮವಾಗಿ ತಿರುಗಾಡುತ್ತಿದ್ದರೆ ಮತ್ತು ಇನ್ಯಾರದೋ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಯುತ್ತಿದೆ ಇದೆಸ್ಟು ಸರಿ, ಚುನಾವಣಾ ಸಂದರ್ಭದಲ್ಲಿ ನಡೆಯುವ ಇಂತಹ ಕೃತ್ಯಗಳನ್ನು ತಡೆಯಲು ಪೊಲಿಚರು ಸಮರ್ತ ವ್ಯವಸ್ತೆಯನ್ನು ತಯಾರು ಗೊಳಿಸಬೇಕು ಮತ್ತು ಇಲ್ಲಿನ ನಾಗರಿಕರು ಶಾಂತಿ ಸಮಾದಾನದಿಂದ ಬದುಕಲು ನಮ್ಮಲ್ಲಿರುವ ದಕ್ಷ ಅಧಿಕಾರಿಗಳು ಇ ಬಗ್ಗೆ ಚಿಂತಿಸಿ ಕಾರ್ಯ ಯೋಜನೆ ಕೈಗೊಂಡರೆ ಒಳಿತು. ಶಾಂತಿ ಕೆಡಿಸುವ ಎಲ್ಲ ವ್ಯಕ್ತಿಗಳನ್ನು ಬಂದಿಸುವ ಸಾಹಸ ಪೋಲೀಸರು ತೋರಿಸಬೇಕು ಪ್ರಜಾಪ್ರಬುತ್ವ ಇ ದಿವ್ಯ ದೇಶದಲ್ಲಿ ಎಲ್ಲರು ಶಾಂತಿ ಕಾಪಾಡಲು ಒಗ್ಗಟ್ಟಾಗಿ ಕೆಲಸ ನಿರ್ವಹಿಸಬೇಕು.....
No comments:
Post a Comment