Tuesday, February 25, 2014

ದೇವ ಭಯ (ಚುಟುಕ)




ಗೆಳತಿಯೊಬ್ಬಳಿದ್ದಳು ನನಗೆ ಬಿಟ್ಟು ಹೋಗುವವರೆಗು
ಉಪಯೋಗಿಸಿದ್ದಳು ಅವಳಿಗೆ ಇನ್ನೊಬ್ಬ ಸಿಗುವವರೆಗು

ಮಾತನಾಡುತ್ತಿದ್ದೆವು ನಾವು ಅರ್ಧ ರಾತ್ರಿಯವರೆಗು!
ಯಾರಾದರು ತಪ್ಪಿ ನಮ್ಮನ್ನು ಗಮನಿಸುವವರೆಗು!

ಮರೆತು ಬಿಟ್ಟಿದ್ದೆವು ನಾವು ಸತ್ಯ ಅರಿವಾಗುವವರೆಗು!  
ಸೃಷ್ಟಿಸಿದವನ ನಿಜವಾದ ನೈಜತೆ ಪರಿಚಯವಾಗುವವರೆಗು!

ಅರಿವಾಗಿದೆ ಇಂದು ನಮಗೆ ವಾಸ್ತವಿಕತೆಯ ಮೆರುಗು!
ಮರುಕಳಿಸದಿರಲಿ ಇನ್ನೆಂದು ದೇವನ ಭಯವಿರುವವರೆಗು

No comments: