ಎಲ್ಲರೂ ಇಲ್ಲಿ ನಾಯಕರು, ನಾವಿಕನಿಲ್ಲದ ದೋಣಿಯಂತೆ.
ಎಲ್ಲರೂ ಇಲ್ಲಿ ಗಾಯಕರು,
ರಾಗವಿಲ್ಲದ ಗಾನದಂತೆ.
ಎಲ್ಲರೂ ಇಲ್ಲಿ ನುಂಗುವವರು,
ಬಡವನಿಗೆ ಏನೂ ಸಿಗದಂತೆ.
ಎಲ್ಲರೂ ಇಲ್ಲಿ ಪ್ರೀತಿಸುವವರು,
ಹೃದಯ ಇಲ್ಲದವರಂತೆ.
ಎಲ್ಲರೂ ಇಲ್ಲಿ ಅಂಧರು,
ಕನಸುಗಳನ್ನೇ ಕಾಣುವಂತೆ.
ಎಲ್ಲರೂ ಇಲ್ಲಿ ಕೋಮುವಾದಿಗಳು,
ಧರ್ಮವನ್ನೆ
ಮರೆತುಬಿಟ್ಟಂತೆ.
No comments:
Post a Comment