Friday, February 21, 2014

ಸರಿ ಎಂದಾದಲ್ಲಿ ಒಪ್ಪಿಕೊಳ್ಳಿ, ಜೀವರಾಶಿಗೆ ಇನ್ನಾದರೂ ಮಾದರಿಯಾಗಿ (ಲೇಖನ)



 

ನೀವು ಇಗಲೂ ಕೈ ಹೇಗೆ ಕಟ್ಟಬೇಕು ಎಂದು ಚರ್ಚೆ ನಡೆಸುವವರೋ, ನೀವು ತಲೆ ಸವರಬೆಕೊ ಬೇಡವೋ ಎಂದು ಸಂವಾದ ನಡೆಸುವವರೋ, ಸ್ತ್ರೀಯರು ಮಸೀದಿಗಳಿಗೆ ಹೋಗಬೇಕೋ ಬೇಡವೋ ಎಂದು ವಿಮರ್ಸಿಸುವವರೋ, ನಿಮ್ಮಲ್ಲಿ ಹೇಳಲಿಕ್ಕಿರುವುದು ಇಸ್ಟೇ, ನೀವು ಸ್ತ್ರೀಯರು ಮಸೀದಿಗೆ ಹೋಗಬೇಕೋ ಬೇಡವೋ ಎಂದು ವಿಮರ್ಶೆ ನಡೆಸುತ್ತಿರುವಾಗ ಇಸ್ಲಾಮಿನ ಶತ್ರುಗಳು ನಿಮ್ಮ ಮಸೀದಿಗಳನ್ನೇ ಇಲ್ಲವಾಗಿಸಲು ತೀರ್ಮಾನಿಸಿದ್ದಾರೆ, ನೀವು ತಲೆ ಸವರಬೆಕೊ ಬೇಡವೋ ಎಂದು ಸಂವಾದ ನಡೆಸುವಾಗ ನಿಮ್ಮ ತಲೆಯನ್ನೇ ತೆಗೆಯುವ ವಿಚಾರದಲ್ಲಿ ಇಸ್ಲಾಮಿನ ಶತ್ರುಗಳು ಒಂದೇ ಅಭಿಪ್ರಾಯ ಹೊಂದಿದ್ದಾರೆ, ನೀವು ಕೈ ಹೇಗೆ ಕಟ್ಟಬೇಕು ಎಂದು ಚರ್ಚೆ ನಡೆಸುವಾಗ ನಿಮ್ಮ ಕೈ ಗಳನ್ನು ಕಡಿಯಯಲು ಇಸ್ಲಾಮಿನ ಶತ್ರುಗಳು ಹೊಂಚು ಹಾಕುತಿದ್ದಾರೆ.

ನಮ್ಮ ವಸ್ತು ಸ್ತಿತಿಯೇ ಬದಲಾಗುತ್ತಿರುವಾಗ, ನಾವು ಭಿನ್ನ ಭಿನ್ನವಾಗಿ ಹೋಗಿರುವಾಗ, ನಮ್ಮ ತಲೆಮಾರುಗಳನ್ನೇ ಇಲ್ಲವಾಗಿಸುವ ಪ್ರಯತ್ನಗಳು ನಡಯುತ್ತಿರುವಾಗ,ಇನ್ನೂ ಕೂಡ ತರ್ಕಗಳನ್ನು ಮಂಡಿಸುವ ಸಲುವಾಗಿ ಜೇಬಿನಲ್ಲಿ ಚೀಟಿಗಳನ್ನು ಇಟ್ಟುಕೊಂಡು ತಿರುಗಾಡುವವರು ನಮ್ಮ ಮದ್ಯೆ ಇರುವುದಾದರೆ, ಸುಶಿಕ್ಸಿತವಲ್ಲದ ಸ್ತಿತಿಗೆ ನಾವು ತಲುಪುವುದಾದರೆ,ಅದು ಇಸ್ಲಾಮಿಗೆ ಮತ್ತು ಅದರ ಅನುಯಾಯಿಗಳಿಗೆ ಒಳಿತಲ್ಲ. ಕೂನುತಿನ ವಿಷಯ , ಬಿಸ್ಮಿಯ ವಿಷಯ, ಪ್ರಾರ್ಥನೆಯ ವಿಷಯ, ಸರ್ತಿನ ವಿಷಯ, ತರ್ತೀಬಿನ ವಿಷಯ ಹೀಗಿರುವ ಹಲವು ವಿಚಾರಗಳಲ್ಲಿ ನಮಗೆ ಭಿನ್ನಾಭಿಪ್ರಾಯಗಳಿರಬಹುದು, ಆದರೆ ಇದನ್ನು ಹೊರತುಪಡಿಸಿ ಸಾಮ್ಯತೆಯಿರುವ ಮಹತ್ವದ ಹಲವು ವಿಚಾರಗಳು ನಮ್ಮಲ್ಲಿವೆ ಅದರ ಬಗ್ಗೆ ನಾವೇಕೆ ತಲೆ ಓಡಿಸಬಾರದು. ಇಸ್ಲಾಮಿನ ನಿಜವಾದ ಆದರ್ಷ ನಾವು ಅರಿಯಬೇಕು, ಇಸ್ಲಾಮಿಗೆ ಕುತ್ತು ಬರುವಾಗ ಅದರ ಏಳಿಗೆಗಾಗಿ ಚಿಂತೆ ಮಾಡುವವನೇ ನಿಜವಾದ ಇಸ್ಲಾಮಿ ವಿಶಾಲ ಚಿಂತನೆಯುಳ್ಳವನು,

 ಭಿನ್ನಾಭಿಪ್ರಾಯಗಳಿರುವ ಕೆಲವು ವಿಚಾರಗಳನ್ನು ತೆಗೆದು ಅದುವೇ ಅಲ್ಲಾಹನ ಭೂಮಿಯಲ್ಲಿ ಅತಿ ಮುಕ್ಯವಾದ ವಿಚಾರಗಳು ಎಂಬಂತೆ ನಾವು ವರ್ತಿಸುವುದಾದರೆ ನಾವು ಇಸ್ಲಾಮನ್ನು ನಿಜವಾದ ಅರ್ಥದಲ್ಲಿ ಅರಿತುಕೊಳ್ಳಲು ವಿಫ಼ಲರಾಗಿದ್ದೆವೆ ಎಂದರ್ಥ. ಮಸೀದಿಯ ನೀರಿನ ತೊಟ್ಟಿಯಲ್ಲಿ ನೀರು ತುಂಬಿಸುವುದು,ವಂತಿಗೆ ಸಂಗ್ರಹಿಸುವುದು,ಏಲಂ ಕರೆಯುವುದು, ಮತ್ತು ಅಲ್ಲಿರುವ ತೆಂಗಿನ ಕಾಯಿಯ ನಾರಿನಿಂದ ಮಿಸ್ವಾಕ್ ಮಾಡಿದಾಗ ಇಸ್ಲಾಂ ಸುರಕ್ಸಿತವಾಗಿದೆ ಎಂದು ತಿಳಿಯುವವರು ನಾವಾಗಬಾರದು ಹೀಗೆ ತಿಳಿಯುವವರೆ ನಮ್ಮ ಮಸೀದಿ ಕಮೀಟಿಗಳಲ್ಲಿ ಹೆಚ್ಚಿನವರು ಆದ್ದರಿಂದಲೇ ಭಿನ್ನಾಭಿಪ್ರಾಯಗಳನ್ನು ಅವರಿಂದ ಬಗೆಹರಿಸಲು ಸಾಧ್ಯವಾಗಿಲ್ಲ. ಇಸ್ಲಾಮಿನ ಆದರ್ಶಕ್ಕಾಗಿ ಮಾತನಾಡುವ ವಿಧ್ವಾಂಸರು ನಮ್ಮಲ್ಲಿ ಬೆಳೆದು ಬರಬೇಕು , ಇನ್ನೊಬ್ಬನದು ತಪ್ಪು ನಾವೇ ಸರಿ ಎಂದು ವಾದಿಸಿಕೊಂಡು ನಾವಿರುವುದಾದರೆ ನಾವು ಮತ್ತಷ್ಟು ತಪ್ಪಿ ಹೋಗುತ್ತೇವೆ ಮತ್ತು ಅಂತಹ ಜ್ವಲಂತ ಉದಾಹರಣೆಗಳನ್ನು ನಾವು ಕಾಣುತ್ತಿದ್ದೇವೆ ಕೂಡ.

 ಇನ್ನಾದರು ನಾವು ಇಸ್ಲಾಮಿನ ಸಂಪೂರ್ಣ ಜೀವನ ಪದ್ದತಿಯನ್ನು ಅರಿತುಕೊಂಡು ಪರಸ್ಪರ ಸಹೋದರರಾಗಿ ಬಾಳೋಣ,ಜಗತ್ತಿನ ಅಂಧಕಾರಕ್ಕೆ ಬೆಳಕಾಗೋಣ, ನಾವು ನಮ್ಮ ಸ್ಟೆಜುಗಳಲ್ಲಿ ಮಾತ್ರವಲ್ಲ, ಪೆಜುಗಳಿರುವ ಪತ್ರಿಕೆಯಲ್ಲೂ ಇಸ್ಲಾಮಿನ ಆದರ್ಷ ತೋರಿಸಬೇಕೆ ಹೊರತು ನಮ್ಮ ಭಿನ್ನತೆಯನ್ನಲ್ಲ. ಇನ್ನೂ ಕೂಡ ಇಸ್ಲಾಮನ್ನು ತತ್ವದಲ್ಲಿ ಮಾತ್ರ ಅಳವಡಿಸಿರುವ ಜೀವನ ಕ್ರಮದಲ್ಲಿ ಅಳವಡಿಸದೇ ಇರುವವರಿಗೆ ತಿಳಿದವರು ದಾರಿ ತೋರಿಸಬೇಕಾದ ಅಗತ್ಯವಿದೆ, ಧರ್ಮದ ಸಂಪೂರ್ಣ ಭದ್ರತೆಯ ವ್ಯವಸ್ತೆಗಾಗಿ ನಾವು ಶ್ರಮಿಸಬೇಕು,



ಇನ್ನು ಯಾವ ಪ್ರವದಿಯೂ ಬರಲಿಕ್ಕಿಲ್ಲ, ಇನ್ನು ಮೇಲಿನ ಆಕಾಸದಿಂದ ಮಲಕುಗಲು ಯಾವ ಸಂದೇಶವನ್ನು ಹೊತ್ತು ತರಲಿಕ್ಕಿಲ್ಲ, ಇನ್ನು ಹಿರಾ ಗುಹೆಯಲ್ಲಿ ಆದ್ಬುತಗಳು ಸಂಭವಿಸಳಿಕ್ಕಿಲ್ಲ, ಇನ್ನು ಮಾನವ ವಿಮೋಚನೆಗಾಗಿ ಒಬ್ಬ ಪ್ರವಾದಿ ಬರಲಿಕ್ಕಿಲ್ಲ, ಇದು ಕ಼ುರಾನ್ ಮತ್ತು ಹದೀಸ್ ನಿಂದ ನಾವು ಕಂಡು ಕೊಂಡ ಸತ್ಯ, ಆದ್ದರಿಂದ ಇ ಸತ್ಯದ ಆಧಾರದಲ್ಲಿ ನಾವು ಮಾನವ ವಿಮೋಚನೆಗೆ ನೆರವಾಗೋಣ, ನಮ್ಮಲ್ಲಿರುವ ಬಡವರ ಬಗ್ಗೆ ಯೋಚಿಸೋಣ,ಚಿಕತ್ಸೆ ಪಡೆಯಲು ಸಾಧ್ಯವಾಗದೇ ನರಳಾಡುತ್ತಿರುವ ನಮ್ಮವರಿಗೆ ನೆರವಾಗೋನ, ನಮಗೆ ತಿಳಿಯದೆ ಅಂಟಿಕೊಂಡಿರುವ ವರದಕ್ಷಿಣೆ ಪದ್ಧತಿ ಬಗ್ಗೆ ಮಾತನಾಡೋಣ, ಕ್ರೌರ್ಯದ ಬಗ್ಗೆ ದ್ವನಿಯೆತ್ತೋನ,ಮರ್ದಿತರ ಪಾಲಿಗೆ ಅಶಾಕಿರನವಾಗೋಣ ಭಿನ್ನತೆಗಳನ್ನು ಬದಿಗಿಟ್ಟು ಏಕತೆಗಾಗಿ ಇನ್ನಾದರೂ ಹೋರಾಡೋಣ ಅಲ್ಲಾಹನ ಭೂಮಿಯಲ್ಲಿ ರಕ್ತ ಕ್ರಾಂತಿ ಮಾಡದಿರೋಣ, ಇತರ ಧರ್ಮೀಯರಿಗೆ ಇಸ್ಲಾಮಿನ ನೈಜತೆಯ ಪರಿಚಯ ಮಾಡಿ ಸಹೋದರಾಗಿ ಪರಸ್ಪರ ಅರಿತು ಬಾಳುವ  ಸದ್ಬುದ್ದಿಯನ್ನು ನಮಗೆಲ್ಲರಿಗೂ ದಯಾಮಯನಾದ ಅಲ್ಲಾಹನು ಅನುಗ್ರಹಿಸಲಿ.







No comments: