Friday, February 14, 2014

ಬದಲಾಗಬೇಕಾದ ವ್ಯವಸ್ತೆಯಲ್ಲಿ ಯುವಕರ ಪಾತ್ರವಿರಲಿ (ಲೇಖನ)




 ಇ ಜನತೆ ಶುದ್ದ ನೀರು ಕೇಳಿದ್ದು ಕುಡಿಯಲು, ಸ್ನಾನ  ಮಾಡಲಿಕ್ಕಲ್ಲ!  ಅದನ್ನು ಕೂಡ ನಮ್ಮ ಜನ ಪ್ರತಿನಿಧಿಗಳಿಂದ ಇನ್ನೂ ನೀಡಲು ಸಾಧ್ಯವಾಗಿಲ್ಲ, ಒಂದು ಕೊಡ ನೀರು ತರಲು ನಮ್ಮ ಅದೆಸ್ಟೋ ಸಹೋದರಿಯರು ಇಂದು ಏಳೆಂಟು ಕಿಲೋಮೀಟರ್ ನಡೆಯಬೇಕಾದ ದುಸ್ತಿತಿ ಇನ್ನೂ ನಮ್ಮ ದೇಶದ  ಹಲವು ಹಳ್ಳಿಗಳಲ್ಲಿದೆ ,ಬಡ ರೋಗಿಗಳು ಅಧಿಕ ಸಂಖ್ಯೆಯಲ್ಲಿರುವ , ಕ್ಷಯ ರೊಗಿಗಲಿರುವ, ಏಡ್ಸ್ ಪೀಡಿತರು, ಬಾಲ ಕಾರ್ಮಿಕರು, ವಿದ್ಯಬ್ಯಾಸಕ್ಕೆ ಶಾಲೆಗಳ ಕೊರತೆಯಿರುವ ಒಂದು ದುರಂತ ದೇಶ ನಮ್ಮದು, ಆಸ್ಪತ್ರೆಗಲಿಲ್ಲದ, ವಾಸಿಸಲು ಮನೆಯಿಲ್ಲದ, ಕೊನೆ ಪಕ್ಷ ಮುತ್ರದೊಡ್ಡಿಗಳು ಇಲ್ಲದ ಪರಿಸ್ತಿತಿ ನಮ್ಮ ಹಲವರಿಗಿಲ್ಲಿ, ಭಾರತದಲ್ಲಿ ಅಂದು ಕೊಂಡಸ್ಟು ಅಭಿವ್ರಿದ್ದಿ  ಅರವತ್ತಾರು ವರ್ಷ ಕಳೆದರೂ ಸಾಧಿಸಲಾಗಲಿಲ್ಲ. 

ಧನ ರಾಶಿಯಿಲ್ಲದ , ಕೃಷಿ ಇಲ್ಲದ ದೇಶ ಖಂಡಿತ  ನಮ್ಮದಲ್ಲ, ಆದರೆ ಅವೆಲ್ಲ ಉಳ್ಳವರ ಪಾಲಾಗಿದೆ, ಸ್ವಾತಂತ್ರ್ಯ ಸಂಧರ್ಬದಲ್ಲಿ  ಐದು ಕೋಟಿ ಉಳ್ಳ ಐದು ಜನರಿದ್ದ ಇ ದೇಶದಲ್ಲಿ ಇಂದು ಕಂಪ್ಯೂಟರ್ ನ ಲೆಕ್ಕಕ್ಕೆ ಸಿಗದಸ್ಟು ಕೋಟಿಗಟ್ಟಲೆ ದುಡ್ಡಿರುವ ಅಂಬಾನಿ, ಟಾಟಾ ,ಬಿರ್ಲಾಗಳು ಮಾತ್ರ ನೂರು ಸಂಖೆಯಲ್ಲಿದ್ದಾರೆ, ಹೊಲದಲ್ಲಿ ಬೆಲೆ ಬೆಳೆಯುವವನು,ಅದನ್ನು  ಮಾರುವವನು ಮತ್ತು ಖರೀದಿಸುವವನು  ಎಲ್ಲರಿಗೂ ಇಲ್ಲಿ ಸಮಾನ ನ್ಯಾಯ ಸಿಗಬೇಕಾಗಿದೆ, ಯಾರಿಗೂ ನಸ್ಟವಾಗದ  ರೂಪು ರೇಷೆ ಇ ದೇಶಕ್ಕೆ ಅಗತ್ಯವಿದೆ , ಆದರೆ ದುರಾದ್ರಸ್ಟವಸ್ಸಾತ್ ಇಂದು ಕೊಳ್ಳುವವನ ಕೈಯ್ಯಲ್ಲಿ ದುಡ್ಡಿಲ್ಲ, ಬೆಳೆದವನು ಆತ್ಮಹತ್ಯೆ ಮಾಡುವ ಹಂತಕ್ಕೆ ತಲುಪಿರುವುದು ಸಾಮಾನ್ಯ, ಆತ್ಮಹತ್ಯೆ ನಡೆದರೆ ಅದಕ್ಕೆ ಪರಿಹಾರ ನೀಡಿ ಆ ವ್ಯವಸ್ತೆಯನ್ನೇ ಕೊಳ್ಳಲಾಗುತ್ತಿದೆ, ಸಂಪತ್ತಿನ ಗಳಿಕೆಯಲ್ಲಿ ಮನುಷ್ಯನು ಉತ್ತಮ ದಾರಿಯನ್ನು ಕಂಡುಕೊಳ್ಳಬೇಕದದ್ದು ಅಗತ್ಯವಾಗಿದೆ. 

ಮಹಾದಡ್ದನು ಸುಖ ವಯ್ಬೋಗದಲ್ಲಿ  ಮೆರೆಯುತ್ತಿರುವಾಗ ಅದೆಸ್ಟೋ ಮೆಧಾವಿಗಲೆನೆಸಿಕೊಂಡವರು  ಜೀವನೋಪಾಯಕ್ಕಾಗಿ ಕಷ್ಟ ಪಡುತ್ತಿದ್ದಾರೆ,ದೇಶದ ಒಂದು ದೊಡ್ಡ ವರ್ಗ ಇಂದು ಬಡತನದ ಭೇಗೆಯಲ್ಲಿ ಬೇಯುತ್ತಿದೆ, ಬಡತನ ಸಮಾಜದ ಕಾನೂನು ಮತ್ತು ಭದ್ರತೆಗೂ ಅಪಾಯಕಾರಿಯಾಗಿದೆ, ಜೀವನದಲ್ಲಿ ನೊಂದಿರುವ ಒಬ್ಬ ಬಡವನಿಗೆ ತನ್ನ ರಾಷ್ಟ್ರಕ್ಕಾಗಿ ಸೇವೆ ಸಲ್ಲಿಸಲು ಅಥವಾ  ಜನರ ಅಭಿಮಾನ ರಕ್ಸಿಸುವ ಸ್ತೈರ್ಯ ಇರುವುದಿಲ್ಲ ಏಕೆಂದರೆ  ಆತ ನಂಬಿದ ರಾಷ್ಟ್ರ ಆತನ ಬಡತನಕ್ಕೆ ಯಾವುದೇ ಪರಿಹಾರ ನೀಡಿಲ್ಲ, ಇತಿಹಾಸದ ಆರಂಭ ಕಾಲದಿಂದಲೇ ಮಾನವ ಬಡತನ ಮತ್ತು ಬಡವನನ್ನು ಅರಿತಿದ್ದಾನೆ. 








ಬಡತನಕ್ಕೆ ಹೆದರಿ ಮಕ್ಕಳನ್ನು ಕೊಳ್ಳುವ ಪರಿಸ್ತಿತಿ ಬಂದಿದೆ, ಕೌಟುಂಬಿಕ  ಕಲಹಗಳು ಹೆಚ್ಚಾಗುತ್ತಿದೆ , ಯುವಕ ಯುವತಿಯರು ಬಡತನದ ಕಾರಣಕ್ಕಾಗಿ ತಮ್ಮ ತಂದೆ  ತಾಯಿಯನ್ನು ನಿರ್ಲಕ್ಸಿಸುತ್ತಿದ್ದಾರೆ,ಬಡತನದ ಸ್ತಿತಿ ಇಲ್ಲಿ ಬದಲಾಗಬೇಕಾದರೆ ಹೊಸ ರಾಜಕೀಯ ಕ್ರಾಂತಿ ನಡೆಯಬೇಕು, ಇ ದೇಶದ  ಯುವಕರಿಂದ ದುಸ್ಟ ವ್ಯವಸ್ತೆಯನ್ನು ಬದಲಾಯಿಸಲು ಸಾದ್ಯವಿದೆ, ಕ್ರಾಂತಿ ಸಾರಿದ ಎಲ್ಲ ಹೋರಾಟಗಳು ಯುವಕರಿಂದ ನಡೆದಿರುವುದು,ಯುವ ಜನತೆಯಿಂದ ಏಲ್ಲವೂ ಇಲ್ಲಿ ಬದಲಾಯಿಸಲು ಸಾದ್ಯ, ಯುವಕರು ದೇಶದ ರಾಜಕೀಯಕ್ಕೆ ದುಮುಕಿ ಗಲೀಜು ರಾಜಕೀಯವನ್ನು ನಿರ್ಮೂಲನೆ ಮಾಡಬೇಕು ಆಗ ಮಾತ್ರ ಇ ಹೇಳಿದ, ಮತ್ತು ಇಂತಹ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಾಣಲು ಸಾದ್ಯ ......