Friday, February 14, 2014

ದೆವೇಚ್ಚೆ (ಚುಟುಕ)




 ಉಸಿರಲ್ಲಿ ಉಸಿರಾಗಿ ಇದ್ದಳು ಅವಳು,
  ಹೆಸರು ಕೂಡ ನೆನಪಿಲ್ಲದಾಗಿ ಹೋದಳು,

 ಮನಸಿನಲ್ಲಿ ಅಡಗಿಸಿದ್ದೆ ನಾನು ಅವಳನ್ನು,
 ಕನಸು ಅಗುವಳೆಂದು ತಿಳಿಯದೆ ಹೋದೆ ನಾನು,

ಕಾರಣ ತಿಳಿಸದೇನೆ ಹೊರಟು ಹೋದಳು,
ಕಾರಣವಿಲ್ಲದೆ ಪ್ರೀತಿ ಮುಕ್ತಾಯ ಮಾಡಿದಳು,

   ಮರೆಯಬೇಕಾದಾಗ ಇಲ್ಲಿ ಮರೆಯಲೇಬೇಕು,
ಮರೆತು ಹೋದಮೇಲೆ ಯಾಕೆ ಯೋಚಿಸಬೇಕು,

      ನಡೆಯುವಾಗ ಇಲ್ಲಿ ಎಲ್ಲವೂ ನಡೆಯಲೇಬೇಕು
   ದೇವನ ಇಚ್ಛೆಗೆ ನಾವೆಲ್ಲ ತಲೆಬಾಗಲೇಬೇಕು.

No comments: