Friday, February 14, 2014

ನ್ಯಾಯದ ಪರ ನಿಲ್ಲಲು ಸಾಧ್ಯವಾಗದಿದ್ದರೆ ಮೌನಿಗಳಾಗಿ (ಲೇಖನ)






ಮುಸ್ಲಿಂ ಹೆಣ್ಣು ಮಕ್ಕಳ ನ್ರತ್ಯಕ್ಕೆ ಫ಼ತ್ವ ಅಡ್ಡಿ ಎಂಬ ತಲೆಬರಹದಡಿ ತಲೆಕೆಳಗಾದ ಕೆಲವು ಮಾಧ್ಯಮಗಳು ವರ್ಣರಂಜಿತ ಪ್ರಕಟಣೆಯನ್ನು ಪ್ರಕಟಪಡಿಸಿ ತನ್ನ TRP ಹೆಚ್ಚಿಸಿಕೊಳ್ಳುವ ಭರಾಟೆಯಲ್ಲಿ ತೊಡಗಿತು, ನೈಜ ಸುದ್ದಿಯನ್ನು ಮಾನವರಿಗೆ ತಲುಪಿಸಬೇಕಾದ ಮಾಧ್ಯಮಗಳು ಇಂದು ಕಪೋಲಕಲ್ಪಿತ ವರದಿಗಳಿಗೆ ಹೆಚ್ಛು ಮಹತ್ವ ಕೊಡುತ್ತಿರುವುದು ವಿಪರ್ಯಾಸದ ಸಂಗತಿ, ಕೆಲವು ಮಾಧ್ಯಮಗಳಿಗಂತು ಇಂತಹದೆ  ಕೆಲಸ, ಕೆಲವು ಮಾದ್ಯಮಗಳು ಧರ್ಮಗುರುವೊಬ್ಬರು ನ್ರತ್ಯ ಮಾಡಬಾರದು ಎಂದು ಫ಼ತ್ವ ಹೊರಡಿಸಿದ್ದಾರೆ ಎನ್ನುವ  ಸುದ್ದಿಯನ್ನು ಪ್ರಕಟಪಡಿಸಿದವು, ಸಮಾಜದಲ್ಲಿ ಜವಾಬ್ದಾರಿಯುತ ಕೆಲಸ ನಿರ್ವಹಿಸಬೇಕಾದ ಮಾಧ್ಯಮಗಳು ಮೊದಲು ಫ಼ತ್ವ ಯಾವುದು ಚರ್ಚೆ ಯಾವುದು ಎಂದು ತಿಳಿದುಕೊಂಡು ನಂತರ ತನ್ನ ಪೇಜುಗಲನ್ನು ಬರ್ತಿ ಮಾಡಬೇಕು,ತನ್ನ ಕಾರ್ಯಕ್ರಮವನ್ನು ರೂಪಿಸಿಕೊಳ್ಳಬೇಕು, ಮಾಧ್ಯಮಗಳು ಯಾರದೋ ವಿರುದ್ದ ಬರೆಯುವ ಆತುರದಲ್ಲಿ ಯಾರೋ ಬೀಸುವ ದಾಳಕ್ಕೆ ಮೆಗಾಫೋನ್ ನಂತೆ  ವರ್ತಿಸುವುದನ್ನು ನಿಲ್ಲಿಸಬೇಕು. ಸರ್ಕಾರವೇ ಮತಾಂಧತೆಯನ್ನು ಪೋಸಿಸುತ್ತಿದೆ, ಮತ ಬ್ಯಾಂಕ್  ಹುಟ್ಟಿಕೊಂಡು ಬಡವರಿಗೆ ಬದುಕಲು ಸಾದ್ಯವಿಲ್ಲ ಎಂದು ತಿಳುವಳಿಕೆಯ ಕೊರತೆಯಿಂದ ಕೆಲವರು ಒದರಿದಾಗ ಅದನ್ನೇ ದೊಡ್ಡ ಅಕ್ಸರಗಳಲ್ಲಿ ಬರೆಯುವ ಮುಂಚೆ ಒಂದು ಸಲ ಯೋಚಿಸಬೇಕು, ಮಾಧ್ಯಮಗಳು ವಸ್ತು ನಿಸ್ಟ ವಿಚಾರವನ್ನು ಪ್ರಕಟಪಡಿಸದೆ ಅನಗತ್ಯ ವಿಚಾರಗಳನ್ನು ಪ್ರಕಟಪಡಿಸಿ ಇಸ್ಲಾಂ ಮತ್ತು ಮುಸ್ಲಿಮರ ಬಗ್ಗೆ ಅತಿರಂಜಿತ ವರದಿಗಳನ್ನು ನೀಡುವ ಪ್ರಕ್ರೀಯೆ ನಿಲ್ಲಿಸಬೇಕು, ಮಾಧ್ಯಮಕ್ಕೆ ಇ ದೇಶದಲ್ಲಿ ಬಹಳ ಗೌರವವಿದೆ ಮತ್ತು ಜನರು ಅದರ ಮೇಲೆ ಬಹಳ ನಂಬಿಕೆಯಿಟ್ಟಿದ್ದಾರೆ, ಇ ನಿಟ್ಟಿನಲ್ಲಿ ಬಿಕ್ಕಟ್ಟಿರುವ ಇ ಸಮಾಜದಲ್ಲಿ ಒಗ್ಗಟ್ಟನ್ನು ಸ್ರಿಸ್ಟಿಸಲು ಪ್ರಯತ್ನಿಸಬೇಕೆ  ಹೊರತು ಇನ್ನಸ್ಟು ಚರ್ಚೆಗೆ ಗ್ರಾಸವಾಗುವ ವಿಚಾರಗಳ ಬಗ್ಗೆ ಹೆಚ್ಚು ಗಮನ ಕೊಡಬಾರದು, ಮಾಧ್ಯಮ ಧರ್ಮದ ಒಳಿತಿಗಾಗಿ ಕೆಲಸ ನಿರ್ವಹಿಸುವ ದೈರ್ಯವನ್ನು ಎಲ್ಲ ಮಾಧ್ಯಮ ಪ್ರತಿನಿದಿಗಳು ನಿರ್ವಹಿಸುವುದಾದರೆ ಉತ್ತಮ ವ್ಯವಸ್ತೆಯನ್ನು ಇ ಸಮಾಜದಲ್ಲಿ ಹುಟ್ಟುಹಾಕಲು ಇಲ್ಲಿನ ಮಾದ್ಯಮಗಿಳಿಗೆ ಸಾಧ್ಯವಿದೆ, ಒಂದು ವೇಳೆ ನ್ಯಾಯದ ಪರವಾಗಿ  ನಿಲ್ಲಲು ಸಾಧ್ಯವಾಗದಿದ್ದರೆ ಕೊನೆ ಪಕ್ಷ ಮೌನಿಗಳಾಗಿ ಪಕ್ಕಕ್ಕೆ ಸರಿಯಿರಿ......

No comments: