Thursday, February 13, 2014

ನಾವೇಕೆ ವ್ಯಾಲೆಂಟೈನ್ ಡೇ ಆಚರಿಸಬಾರದು ? (ಲೇಖನ)







ನಮಗೊಂದು ಸಂಸ್ಕೃತಿ ಇದೆ, ನಮಗೆಂದೇ ಕೆಲವು ಆಚರಣೆಗಳೂ ಇವೆ, ಆಚರಿಸಿ ಮುಗಿಸಲು ಸಾಧ್ಯವಿಲ್ಲದಷ್ಟು ಹಬ್ಬಗಳೂ ಈ  ಸುಂದರ ದೇಶದಲ್ಲಿದೆ., ಆದರೆ ನಮ್ಮದಲ್ಲದ, ನಮ್ಮ ಸಂಸ್ಕೃತಿಗೆ ಯಾವ ಅರ್ಥವೂ ನೀಡದ ಒಂದು ದಿನ ನಮ್ಮನ್ನು ಸಮೀಪಿಸುತ್ತಿದೆ ಮತ್ತು ಅದನ್ನು ಸ್ವಾಗತಿಸಲು ಈ  ಜನತೆ ಸಿದ್ದವಾಗಿದೆ ಕೂಡಾ. ನಮ್ಮ ಮೇಲೆಯೇ ನಮಗೆ ನಿಯಂತ್ರಣ ಇಲ್ಲದ, ಅಶ್ಲೀಲತೆಯ, ನಿರ್ಲಜ್ಜೆಯ, ಮಲಿನವಾದ ಸಂಸ್ಕೃತಿಯನ್ನು ನಮಗರಿವಿಲ್ಲದೆಯೆ ನಮ್ಮ ನಡುವೆ ತಂದು ಬಿಡಲಾಗಿದೆ ಮತ್ತು ನಾವು ತನ್ಮಯತೆಯಲ್ಲಿ ಅದರ ಬರುವಿಕೆಯನ್ನು ಕಾಯುತ್ತಿದ್ದೇವೆ.

ವ್ಯಾಲೆಂಟೈನ್ ಡೇ ಎನ್ನುವುದು ರೋಮನ್ನರಿಂದ ಈ  ದೇಶಕ್ಕೆ ಹರಿದು ಬಂದ ಸಂಸ್ಕೃತಿ ಅದಕ್ಕೂ ನಮ್ಮ ದೇಶಕ್ಕೂ, ನಮ್ಮ ಜನರಿಗೂ  ಯಾವುದೇ ಸಂಬಂದವಿಲ್ಲ, ಆದರೆ ಸಂಬಂದಗಳನ್ನು ಕಲ್ಪಿಸಲಾಗಿದೆ. ಇಂದು ಈ  ಸಮಾಜದಲ್ಲಿ ಯುವಕ ಯುವತಿಯರು  ವ್ಯಾಲೆಂಟೈನ್ ಡೇ ಯನ್ನು ಉನ್ಮಾದದಿಂದ ಆಚರಿಸುತ್ತಿದ್ದಾರೆ, ಯುವಕ ಯುವತಿಯರು ಎಂದು ಹೇಳಿದರೆ ತಪ್ಪಾಗಬಹುದು ಯಾವುದೇ ವಯಸ್ಸಿನ  ಇತಿಮಿತಿ  ಇಲ್ಲದೆ , ಯಾವುದೇ ಧರ್ಮದ ರೇಖೆಯಿಲ್ಲದೆ, ಎಲ್ಲರೂ ಅಶ್ಲೀಲತೆಯ, ಲಜ್ಜೆಗೆಡಿತನದ ಈ  ಆಚರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಭಾರತೀಯರಾದ ನಾವೇಕೆ ಇದನ್ನು ವಿರೋಧಿಸಬೇಕು..?

ಪ್ರೀತಿ ಪ್ರೇಮ ಎನ್ನುವುದು ವರ್ಷಕ್ಕೊಂದು ಬಾರಿ ಆಚರಿಸಿ ಮರೆತು ಬಿಡಬೇಕಾದ ವಿಚಾರವಂತೂ ಖಂಡಿತ ಅಲ್ಲ, ಈ ಭೂಮಿ ಇಂದು ನಿಂತಿರುವುದು  ಪ್ರೀತಿ ಪ್ರೇಮ ಎಂಬ ಒಂದು ನಂಬಿಕೆ ಮೇಲೆ.  ಅಂಥಹ  ಮಾದುರ್ಯಭರಿತ ಪ್ರೀತಿಯನ್ನು ಒಂದು ದಿನ ನಶೆ, ನ್ರತ್ಯ ಎಂಬ ಅಶ್ಲೀಲತೆ ಯಿಂದ ಆಚರಿಸುವುದಾದರೆ ಅದರ ಗೌರವದ ಬಗ್ಗೆ ನಾವು ಯೋಚಿಸಬೇಕಾಗಿದೆ.ವ್ಯಾಲೆಂಟೈನ್ ಡೇ ಹೆಸರಿನಲ್ಲಿ ನಾವೇನು ಸಾಧಿಸುತಿದ್ದೇವೆ  ಮತ್ತು ದುಷ್ಟ  ಪಾಶ್ಚಾತ್ಯ ಸಂಸ್ಕೃತಿಯನ್ನು ಎಷ್ಟು ಅನುಕರಿಸುತಿದ್ದೇವೆ ಎಂದು ಮೆಲುಕು ನೋಟ ಹಾಕಬೇಕಾಗಿದೆ, ಒಂದು ವ್ಯಾಲೆಂಟೈನ್ ಡೇ ಯ ಹೆಸರಿನಲ್ಲಿ ಏನನ್ನು ಸಾಧಿಸಲಾಗುತ್ತಿದೆ ಎಂಬುವುದನ್ನು  ನಾವು ಅರ್ಥ  ಮಾಡಿಕೊಳ್ಳಬೇಕು, ವ್ಯಾಲೆಂಟೈನ್ ಡೇ ಎಂಬ ಒಂದು ವಿಕೃತವಾದ ದಿನವನ್ನು ಆಚರಿಸಿ ಕೆಲವು ಕಂಪನಿಗಳು ಲಾಭ ಮಾಡುತ್ತಿದೆ, ಆದರೆ ಇದನ್ನು ತಿಳಿಯದ ನಾವು ಪ್ರೀತಿಯ ಹೆಸರಲ್ಲಿ ಹುಚ್ಚರಾಗಿ, ಗ್ರೀಟಿಂಗ್ ಕಾರ್ಡ್ ಹಂಚಿ, ಅಮಲಿನಲ್ಲಿ ತೇಲಾಡಿ, ನಮ್ಮ ಹಣವನ್ನು ಪೋಲು ಮಾಡುವುದಲ್ಲದೆ ಭಾರತದ ಭವ್ಯ ಸಂಸ್ಕೃತಿಯನ್ನು ಪಾಶ್ಚಸ್ತ್ಯ ಸಂಸ್ಕೃತಿಯ ಅನುಕರಣೆಯ ಹೆಸರಿನಲ್ಲಿ ಕೆಡಿಸುತಿದ್ದೇವೆ.

ನಮಗೆ  ಪೂರಕವಲ್ಲದ ನಮ್ಮ ಸಂಸ್ಕೃತಿಗೆ ಮಾರಕವಾಗುವ ಇಂಥಹ ಆಚರಣೆಯನ್ನು ಬಿಟ್ಟು  ಸಂಸ್ಕೃತಿಯನ್ನು ಸ್ವಚ್ಛ ಮಾಡುವ ಮತ್ತು ನಮ್ಮನ್ನು ನಾವು ಬದಲಾಯಿಸಿಕೊಲ್ಲಬೇಕಾದ ಅಗತ್ಯವಿದೆ, ಇದಕ್ಕೆಲ್ಲ ಪರಿಹಾರ ಸೃಷ್ಟಿಕರ್ತನ  ಭಯ, ಮನುಷ್ಯನನ್ನು ಎಲ್ಲಾ  ಕಾಲದಲ್ಲೂ ಸಚ್ಚಾರಿತ್ರ್ಯರನ್ನಾಗಿ ಮಾಡಿದ್ದು ಇದೆ ಭಯ, ಈ  ಭಯವೇ  ಮನುಷ್ಯನ ವ್ಯಕ್ತಿತ್ವನ್ನು ಪೋಷಿಸಿದೆ, ಮಲಿನಗೊಂಡಿರುವ ಮಾಲಿನ್ಯದಿಂದ ನಾವು ಹೊರಗೆ ಬರಬೇಕು ಮತ್ತು ಒಂದು ಉತ್ತಮ ಸಂಸ್ಕೃತಿಯನ್ನು ಹುಟ್ಟುಹಾಕಬೇಕು ಮತ್ತು  ಮಲಿನಗೊಂಡಿರುವ ಮಾಲಿನ್ಯವನ್ನು ತೊಡಗಿಸಲು ಹೊರಟಾಗ ಪರಿಸ್ಥಿತಿ ಖಂಡಿತಾ ನಮ್ಮ ಪರವಾಗಿರುವುದಿಲ್ಲ ಆದರೆ ಎಲ್ಲವನ್ನು ತಡೆದುಕೊಳ್ಳಬೇಕು, ಯುವಕರು ಯವ್ವನವನ್ನು ಆದರ್ಶ ಯವ್ವನವಾಗಿಸಬೆಕು, ಸಂಸ್ಕೃತಿಯನ್ನು ಉಳಿಸುವಲ್ಲಿ ಸಹಕರಿಸಬೇಕು, ಈ ಜಗತ್ತಿಗೆ ಭಾರತ ದೇಶದ ಸಂಸ್ಕೃತಿ ಏನೆಂದು ತೋರಿಸಬೇಕು ಮತ್ತು ಸಂಸ್ಕೃತಿಯನ್ನು  ಕಲಿಸಿಕೊಡುವ ಪ್ರಯತ್ನ ನಡೆಸಬೇಕು.


ಯುವಕರು ಅಶ್ಲೀಲತೆಯ, ನಿರ್ಲಜ್ಜೆಯ ಆಚರಣೆಗಳನ್ನು ತ್ಯಜಿಸಿ ಸಮಾಜಕ್ಕೆ ಮಾದರಿಯಾಗಬೇಕು, ನಮ್ಮ ಆಸೆ ಆಕಾಂಕ್ಷೆಗಳನ್ನು  ಪ್ರಕಟಪಡಿಸುವುದಕ್ಕಾಗಿ ನಮ್ಮ ಸಂಸ್ಕೃತಿಯನ್ನು ಕೆಡಿಸಲು ಪ್ರಯತ್ನಿಸಬಾರದು. ನಮಗೊಂದು ಸಂಸ್ಕೃತಿ ಕಲಿಸಿಕೊಡಲಾಗಿದೆ ಅದು ಮದುವೆ ಎಂಬ ಸಂಬಂಧ ಅದನ್ನು ಈ  ದೇಶದ ಆಸ್ತಿಕ, ನಾಸ್ತಿಕ ಎಲ್ಲರೂ ಒಪ್ಪಿಕೊಂಡಿದ್ದಾರೆ, ಆ ದಿವ್ಯ ಬಂಧಕ್ಕೆ ನಾವು  ಏರ್ಪಡುವುದಾದರೆ ನಮ್ಮ ಸಂಸ್ಕೃತಿ, ಮಾನ ಮರ್ಯಾದೆಗಳನ್ನು ಉಳಿಸಿಕೊಳ್ಳಲು ಸಾದ್ಯ, ಒಂದು ಅರೋಗ್ಯ ಪೂರ್ಣ ಸಮಾಜ ನಿರ್ಮಾಣದಲ್ಲಿ ಮದುವೆ ಎಂಬ ಬಂಧನ ಸಂಬಂಧ ಕಲ್ಪಿಸಬಹುದು, ಆ ನಿಟ್ಟಿನಲ್ಲಿ ಯುವಕರು ಜಾಗ್ರತರಾಗಬೇಕು, ಒಂದು ಆದರ್ಶ ಭರಿತ ಯುವ ಸಮುದಾಯ ಈ   ದೇಶಕ್ಕೆ ಅಗತ್ಯವಿದೆ, ಅಶ್ಲೀಲತೆಯ, ಅಕ್ರಮದ ಎಲ್ಲ ಕಾರ್ಯಗಳಿಂದ ನಾವು ದೂರವಿರುವುದಾರೆ ಈ  ಜಗತ್ತು ನಮ್ಮ ಆದರ್ಶ ಯವ್ವನವನ್ನು ಕೊಂಡಾಡದೇ ಇರದು, ಈ  ಜಗತ್ತನ್ನು ನಾವು ಬಿಟ್ಟುಹೋಗುವಾಗ ನಮ್ಮ ಆದರ್ಶ ಜೀವನ ಎಲ್ಲರ ಮನದಾಳದಲ್ಲಿ ನೆಲೆಯೂರಿರಬೇಕು, ನಾವು ಮಣ್ಣಲ್ಲಿ ಮಣ್ಣಾಗಿ ಹೋದರೂ ನಮ್ಮ ಸಂಸ್ಕ್ರತಿಯನ್ನು ಉಳಿಸಿದವರ ಪಟ್ಟಿಯಲ್ಲಿ ನಮ್ಮ ಹೆಸರು ಕೂಡ ಸೇರಿರಬೇಕು.

No comments: