ಮುಂಜಾನೆಯ ನಿದ್ದೆಯ ಮಂಪರಿನಿಂದ ಎದ್ದ ನಾವು ಕಾಫಿಯ ಲೋಟ ಕೈಯಲ್ಲಿಡಿದು ವಾರ್ತಾಪತ್ರಿಕೆ ಬಿಡಿಸಿ ನೋಡುವಾಗ ನಮಗೆ ಕಂಡುಬರುವ ಸುದ್ದಿ ಹಲವು, ಪುಟಗಳನ್ನು ತಿರುಗಿಸುತಿದ್ದಂತೆ ಭೀಕರ ಅಪಘಾತದ ಸುದ್ದಿಗಳು ದಿನನಿತ್ಯ ಸಾಮಾನ್ಯವೆಂಬಂತೆ ಕಾಣಸಿಗುತ್ತವೆ , ಬಾಳಿ ಬದುಕಬೇಕಾಗಿದ್ದ ಯುವಕರು ಅದರಲ್ಲಿ ಅಧಿಕ, ಮನೆಯವರಿಗೆ ಅಧಾರವಾಗಬೇಕಿದ್ದ ಯುವಕರು ಮಾರ್ಗ ಮದ್ಯೆ ಕ್ಷಣಾರ್ದದಲ್ಲಿ ಕಳೆದುಹೊಗುತಿದ್ದಾರೆ, ಇದಕ್ಕೆ ಕಾರಣಗಳೇನು? ಕಾರಣಗಳಿಗೆ ಉತ್ತರವೂ ನಮ್ಮ ಬಳಿಯೇ ಇಲ್ಲವೇ ?
ಸಾಮಾನ್ಯವಾಗಿ ರಸ್ತೆ ಮಾರ್ಗವನ್ನು ಬಳಸಿಕೊಳ್ಳುವವರು ನಾವು, ಹಾಗೆ ಒಂದಲ್ಲ ಒಂದು ಬಾರಿಯಾದರೂ ಭೀಕರ ಅಪಘಾತಗಳನ್ನು ನಾವು ಕಂಡಿರುತ್ತೇವೆ, ಮಾರ್ಗ ಮದ್ಯೆ ರಕ್ತದ ಕೂಡಿಯೇ ಹರಿದಿರುತ್ತದೆ, ಜಾತಿ ಮತ ಬೇದವಿಲ್ಲದೆ ತಕ್ಷಣ ಆಸ್ಪತ್ರೆಗಳಿಗೆ ಸಾಗಿಸಿ ಪ್ರಾಣವನ್ನು ಉಳಿಸಿಕೊಳ್ಳುವ ಪ್ರಯತ್ನವನ್ನೂ ನಡೆಸಲಾಗುತ್ತದೆ, ಮತ್ತು ಅಪಘಾತಗಳಿಗೆ ಕಾರಣ ಏನು ಎನ್ನುವ ಚರ್ಚೆ, ವಿಮರ್ಷೆಯೂ ನಡೆಯುತ್ತದೆ , ಎಲ್ಲ ಮುಗಿದು ಹೋದ ನಂತರ ಚರ್ಚೆ ನಡೆಸುವುದಕ್ಕಿಂತ ಇಂತಹ ಅಪಘಾತಳಿಗೆ ನಾವು ತುತ್ತಾಗದಂತೆ ನೋಡಿಕೊಳ್ಳುವು ನಮಗೆಲ್ಲರಿಗೂ ಒಳಿತು.
ಅಪಘಾತಗಳಿಗೇನು ಕಾರಣ ?
ಅಪಘಾತಗಳಿಗೆ ಕಾರಣ ಹಲವು, ಅದರಲ್ಲಿ ವೇಗದ ಮಿತಿ ಮುಖ್ಯ ಕಾರಣವಾಗಿರಬಹುದು, ಚಾಲನೆಯ ನಿಯಮ ಪಾಲಿಸದೆ ಇರುವುದು, ದುಡುಕಿನ ಸ್ವಬಾವ, ಇನ್ನೊಬ್ಬರಿಗಿಂತ ವೇಗವಾಗಿ ಹೋಗಬೇಕೆನ್ನುವ ಹಂಬಲ ದಾರುಣ ಸಾವಿಗೂ ದುರಂತಗಳಿಗೂ ಕಾರಣ, ಇನ್ನೊಂದು ಕಡೆ ಅಮಾಯಕರು ಅಪಘಾತಗಳಿಗೆ ಬಲಿಯಾಗುತಿದ್ದಾರೆ ಅತ್ಯಂತ ನಿಧಾನವಾಗಿ ವಾಹನ ಚಲಾಯಿಸುವ ಒಬ್ಬ ವ್ಯಕ್ತಿ ವಾಹನ ಅಪಘಾತಕ್ಕೆ ಬಲಿಯಾಗುತ್ತಾನೆ ಕಾರಣ ಅವನೆಸ್ಟೇ ನಿಧನಾವಗಿ ಚಲಿಸಿದರೂ ಎದುರಿನಿಂದ ಬರುವ ವಾಹನ ಮಿತಿಯಿಲ್ಲದ ವೇಗದಲ್ಲಿ ಬಂದು ನಿಯಂತ್ರ ತಪ್ಪಿದಾಗ ಅಮಾಯಕನು ಅದಕ್ಕೆ ಬಳಿಯಾಗಳೆಬೇಕು. ನಮ್ಮ ದುರವಸ್ತೆಯ ಮಾರ್ಗಗಳು , ಅವೈಜ್ಞಾನಿಕ ವೇಗ ತಡೆಗಲೂ ಅಪಘಾತಗಳಿಗೆ ಕಾರಣ , ತಂದೆ ತಾಯಂದಿರು ಕಷ್ಟ ಪಟ್ಟು ದುಡಿದು ಮಗನಿಗೆಂದು ತೆಗುದುಕೊಟ್ಟ ವಾಹನದಲ್ಲಿ ಅದರ ಬೆಲೆ ಮತ್ತು ಮಹತ್ವ ತಿಳಿಯದ ಯುವಕರು ಮಿತಿ ಮೀರಿದ ವೇಗದಿಂದ ವಾಹನ ಚಲಾಯಿಸಿ ಇತರರಿಗೆ ಕಿರಿ ಕಿರಿ ನೀಡುವುದಲ್ಲದೆ ತಮ್ಮ ಅಮೂಲ್ಯ ಜೀವಕ್ಕೆ ತಾವೇ ಮುಳುವಾಗುತಿದ್ದಾರೆ,ವೇಗಾವಾಗಿ ಹೋಗುವುದು, ಇನ್ನೊಬ್ಬರನ್ನು ಮುನ್ನುಗ್ಗಿ ಚಲಾಯಿಸುವುದು ಹೆಮ್ಮೆ ಎಂದು ತಿಳಿದ ಯುವಕರು ತಮ್ಮನ್ನು ಕಾಯುತಿದ್ದ ತಮ್ಮ ಮನೆಯವರಿಗೆ ಆಘಾತದ ಸುದಿಗಳನ್ನು ಕೊಡುತಿದ್ದಾರೆ.
ಐದೋ ಹತ್ತೋ ನಿಮಿಷ ನಾವು ತಡವಾಗಿ ತಲುಪಿದರೆ ನಾವು ಕಳೆದುಕೊಳ್ಳುವುದು ಎನೂ ಇಲ್ಲ, ಅಸ್ಟಕ್ಕೂ ನಾವು ಅಸ್ಟೊಂದು ಸಮಯ ಪ್ರಜ್ಞೆ ಉಳ್ಳವರೂ ಅಲ್ಲ, ಒಂದು ವೇಳೆ ಅಸ್ಟೊಂದು ಸಮಯ ಪ್ರಜ್ಞೆ ನಮಗಿದ್ದರೆ ನಾವು ತಲುಪಬೇಕಾದ ಸ್ತಲಕ್ಕೆ ಸ್ವಲ್ಪ ಬೇಗನೆ ಹೊರಟು ಅತ್ಯಂತ ಜಾಗರೂಕತೆಯಿಂದ ನಮ್ಮವರನ್ನು ತಲುಪುವುದು ಒಳಿತಲ್ಲವೇ? ನಮ್ಮನ್ನೇ ನಂಬಿಕೊಂಡು ಬದುಕುತ್ತಿರುವ ಜೀವಗಳಿಗೆ ನಾವು ಆಸರೆ ಆಗದೆ ಅವರ ಕಣ್ಣಲ್ಲಿ ಕಣ್ಣೀರು ತರಿಸುವುದು ನಮಗೆ ಭೂಷನದ ಸಂಗತಿ ಅಲ್ಲ ಅಲ್ಲವೇ ? ನಮ್ಮ ವೇಗ ಮಿತಿಮೀರಿದಾಗ ನಾವು ಎಚ್ಚೆತ್ತುಕೊಳ್ಳೋಣ !!
ಮರಣ ಎಲ್ಲರಿಗೂ ಕಟ್ಟಿಟ್ಟ ಬುತ್ತಿ ಅದನ್ನು ಯಾರಿಂದಲೂ ತಡೆಯಲು ಸಾದ್ಯವಿಲ್ಲ ಮತ್ತು ಎಲ್ಲವೂ ವಿದಿ ನಿಯಮದಂತೆ ನಡೆಯಲೇಬೇಕು ಆದರೆ ಮಿತಿ ಮೀರಿದ ವೇಗದಿಂದ ವಾಹನ ಚಲಾಯಿಸಿ ನಾವು ಮರಣದ ಪಾಶವನ್ನು ಬಿಗಿದುಕೊಲ್ಲಬಾರದು ಅಥವಾ ಮಿತಿಮೀರಿದ ನಮ್ಮ ವೇಗ ನಮ್ಮನ್ನು ಕಾಲಿಲ್ಲದವರಾಗಿ , ಕೈಇಲ್ಲದವರಾಗಿ , ಕಣ್ಣಿಲ್ಲದವರಾಗಿ, ಅಂಗವಿಕಲರನ್ನಾಗಿ ಮಾಡುವುದಾದರೆ ನಮಗೆ ಇನ್ನೊಬ್ಬರನ್ನು ಹಿಂದೆ ಹಾಕಿ ನಾವೇ ವೇಗವಾಗಿ ಹೋಗಬೇಕೆನ್ನುವ ಅಗತ್ಯ ಇದೆಯೇ? ನಮ್ಮಲ್ಲಿ ಬೇಕಾದಸ್ಟು ಸಮಯವಿದೆ, ತಡವಾಗಿ ತಲುಪಿದರೆ ಅದಕ್ಕೆ ಕಾರಣಗಳೂ ಇವೆ, ಅದರಿಂದ ನಮಗೂ ನಮ್ಮವರಿಗೂ ಒಳಿತಿದೆ, ನಮ್ಮ ಜೀವದ ಬೆಲೆಯೂ ನಮಗೆ ತಿಳಿದಿದೆ, ನಾಳೆ ನಾವು ಮಾರ್ಗದ ಮದ್ಯೆ ಅನಾಥ ಹೆಣವಾಗಿ ಬಿದ್ದು ಶವಾಗಾರದ ವಾಹನದ ಪಾಳಾಗುವುದಕ್ಕಿಂತ ಸ್ವಲ್ಪ ತಡವಾಗಿಯಾದರೂ ತಲುಪುವ ನಿಧಾನ ಒಳಿತಲ್ಲವೇ? ನಮ್ಮ ಹಿಂದೆ ಬರುವವನಿಗೆ ನಾವು ದಾರಿ ಬಿಟ್ಟು ನಮ್ಮವರ ಪಾಲಿಗೆ ಸದಾ ಕ್ಷೇಮದಿಂದ ತಲುಪುವ ದಾರಿಯನ್ನು ಹುಡುಕಿಕೊಳ್ಳೋಣ ....

1 comment:
ಲೇಖನ ತುಂಬಾ ಚೆನ್ನಾಗಿದೆ. ಇನ್ನೂ ಉತ್ತಮ ಲೇಖನಗಳು ತಮ್ಮಿಂದ ಬರಲಿ
Post a Comment